Site icon PowerTV

ಪಟಾಕಿಯ ಕಿಡಿ ತಗುಲಿ ಹೊತ್ತಿ ಉರಿದ ಮನೆ

ಚಿಕ್ಕಮಗಳೂರು: ದೀಪಾವಳಿ ಪಟಾಕಿಯ ಕಿಡಿ ತಗುಲಿ ಮನೆ ಹೊತ್ತಿ ಉರಿದರುವ ಘಟನೆ ಮೂಡಿಗೆರೆ ಪಟ್ಟಣದ ಛತ್ರಮೈದಾನದಲ್ಲಿ ನಡೆದಿದೆ.

ದೀಪಾವಳಿ ಹಬ್ಬದ ಪ್ರಯುಕ್ತವಾಗಿ ರಾಕೆಟ್​ ಪಟಾಕಿಯ ಮನೆಯೊಳಗೆ ಹೋಗಿ ಕಿಡಿ ತಗುಲಿ ಹೊತ್ತಿ ಮನೆ ಹೊತ್ತಿ ಉರಿದಿದೆ.

ಕಿಟಕಿಯಿಂದ ಎರಡನೇ ಅಂತಸ್ಥಿನ ಮನೆಯೊಳಗೆ ಹೋದ ರಾಕೆಟ್, ಬಟ್ಟೆಗೆ ಬೆಂಕಿ ಹತ್ತಿದ ಪರಿಣಾಮ ಇಡೀ ಮನೆ ಬೆಂಕಿ ಹತ್ತಿಕೊಂಡಿದೆ. ಇನ್ನು ಮನೆಯಲ್ಲಿ ಯಾರೂ ಇಲ್ಲದ್ದರಿಂದ ತಪ್ಪಿದ ಭಾರೀ ಅನಾಹುತಯೊಂದು ತಪ್ಪಿದೆ.

ಇನ್ನು ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗಾವುತಿಯಾಗಿದ್ದು, ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Exit mobile version