Site icon PowerTV

ಗೋ ಪೂಜೆ ದಿನವೇ 5 ಹಸುಗಳ ಸಾವು

ಶಿವಮೊಗ್ಗ : ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ನಿನ್ನೆ ಗೋವುಗಳ ಪೂಜೆ ಮಾಡಲಾಗಿದೆ. ಆದರೆ ಗೋ ಪೂಜೆ ದಿನವೇ ಹಾಲು ಕೊಡುವ ಹಸುಗಳು ಸಾಲು ಸಾಲು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಸುಳುಗೋಡು ಗ್ರಾಮ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಹಾಲು ಕೊಡುವ 3 ಹಸುಗಳು ಸುಳುಗೋಡು ಮಾಳವಿಕ ಮಹೇಶ್ ಎಂಬುವವರ ಮನೆಯಲ್ಲಿ ಎರಡು ದಿನಗಳ ಹಿಂದೆ ಅಸುನೀಗಿದ್ದಾವೆ. ಆದರೆ ಹಸುಗಳು ಇದ್ದಕ್ಕಿದ್ದಂತೆ ಸಾವನಪ್ಪಿದ್ದು, ಇವುಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಹೇಶ್ ಕುಟುಂಬ ಹಾಲು ಮಾರಿಕೊಂಡು ಜೀವನ ನಡೆಸುತ್ತಿದ್ರು, ಗೋ ಪೂಜೆ ದಿನವೇ 5 ಹಸುಗಳು ಸಾವನ್ನಪ್ಪಿದ್ದು, ಇನ್ನೆರೆಡು ಹಸುಗಳು ಜೀವನ್ಮರಣ ಸ್ಥಿತಿಯಲ್ಲಿವೆ. ಇದರಿಂದ ಮಹೇಶ್ ಕುಟುಂಬ ಆತಂಕಕ್ಕೊಳಗಾಗಿದೆ. ವಿಷಯ ತಿಳಿಯುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ರಾಮಸ್ಥರು ಶೀಘ್ರವೇ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

Exit mobile version