Site icon PowerTV

ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ನವೆಂಬರ್​​ 1ಕ್ಕೆ ಬಿಡುಗಡೆ

ಬೆಂಗಳೂರು; ಮುಂಬರುವ ವಿಧಾನಸಭೆ ಚುನಾವಣೆಯ ಕೆಲವು ಅಭ್ಯರ್ಥಿಗಳನ್ನ ನವೆಂಬರ್​ 1 ರಂದು ಬಿಡುಗಡೆಯಾಗಲಿದೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ಬೆಂಗಳೂರಿನ ಜೆಡಿಎಸ್​ ಭವನದಲ್ಲಿ ಮಾತನಾಡಿದ ಹೆಚ್​ಡಿಕೆ, ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನ.1ರಂದು ಪಂಚತಂತ್ರ ಯಾತ್ರೆ ಆರಂಭವಾಗಲಿದ್ದು, ಇದೇ ಸಮಾವೇಶದಲ್ಲಿ ಜೆಡಿಎಸ್‌ನ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಕುಮಾರಸ್ವಾಮಿ ಹೇಳಿದ್ದಾರೆ.

2023 ವಿಧಾನಸಭೆಯ ಜೆಡಿಎಸ್​ನ 123 ಕ್ಷೇತ್ರಗಳ ಅಭ್ಯರ್ಥಿಗಳು ಅಂತಿಮವಾಗಿದ್ದು, ಕಳೆದ ವಾರ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಅಭ್ಯರ್ಥಿಗಳ ಪಟ್ಟಿಗೆ ಪೂಜೆ ಸಲ್ಲಿಸಲಾಗಿದೆ ಎಂದರು.

ನಾಳೆ ಕಾರ್ಯಕಾರಿ ಸಮಿತಿ ಸಭೆ ನಡೆಸುವುದಕ್ಕೆ ನಾಳೆ ಪ್ರಸಕ್ತವಾದ ದಿನ ಹಿನ್ನೆಲೆಯಲ್ಲಿ, ಮೊದಲ ಕಾರ್ಯಕ್ರಮ ನಡೆಯಲಿದೆ. ನಾಳೆ ನಾಡಿದ್ದು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆ ಇದೆ. ಈ ಸಭೆಗೆ 13 ರಾಜ್ಯಗಳಿಂದ ಕಾರ್ಯಕಾರಿ ಸಮಿತಿಯ ಸಸ್ಯರು ಆಗಮಿಸಲಿದ್ದಾರೆ.

Exit mobile version