Site icon PowerTV

“ಕಾಂತಾರ”ಗೆ ಮಾರು ಹೋದ ಸೂಪರ್​ ಸ್ಟಾರ್​​​ ರಜನಿಕಾಂತ್.!

ಬೆಂಗಳೂರು: ಈಗಾಗಲೇ ದೇಶಾದ್ಯಂತ ಸಾಕಷ್ಟು ಹೆಸರು ಮಾಡಿರುವ ಕಾಂತಾರ ಸಿನಿಮಾ ಸಿನಿ ಅಭಿಮಾನಿಗಳ ಮೆಚ್ಚುಗೆಯ ಸಿನಿಮವಾಗಿದೆ. ಈ ಸಿನಿಮಾಗೆ ಸಾಕಷ್ಟು ಸಿನಿಮಂದಿ ಹಾಗೂ ಗಣ್ಯಾತಿ ಗಣ್ಯರು ಸಿನಿಮಾವನ್ನು ಕೊಂಡಾಡಿದ್ದಾರೆ.

ಅದೇ ರೀತಿ ಸಿನಿಮಾದ ಕುರಿತು ಸಾಕಷ್ಟು ಮೆಚ್ಚುಗೆಗಳ ಸುರಿಮಳೆ ಕೇಳಿಬಂದಿದೆ. ಇನ್ನು ಕಾಂತಾರ ಸಿನಿಮಾದ ಕುರಿತು ಟ್ವೀಟ್ ಮೂಲಕ ತಮ್ಮ ಸಂತೋಷವನ್ನು ಸೂಪರ್ ಸ್ಟಾರ್ ರಜನಿಕಾಂತ್ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ರಜನಿ, ಗೊತ್ತಿರೋದಕ್ಕಿಂತ ಗೊತ್ತಿಲ್ಲದಿರೋದೇ ದೊಡ್ಡದು ಎಂದು ಟ್ವೀಟ್ ಮಾಡಿದ್ದಾರೆ. ಸಿನಿಮಾ ಮೂಲಕ ಬಹಳ ಸೊಗಸಾಗಿ ಅದನ್ನ ಕಟ್ಟಿಕೊಡಲಾಗಿದೆ. ಸಿನಿಮಾ ನೋಡಿ ಮೈ ರೋಮಾಂಚನಗೊಂಡಿತು ನಟ, ನಿರ್ದೇಶಕ, ಬರಹಗಾರ ರಿಷಬ್ ಗೆ ಹ್ಯಾಟ್ಸಪ್ ಎಂದು ಹೇಳಿದರು.

ಇನ್ನು ಕಾಂತಾರ ಸಿನಿಮಾಗೆ ದುಡಿದ ಎಲ್ಲಾ ಮಾಸ್ಟರ್’ಪೀಸ್​​ ಪ್ರತಿಯೊಬ್ಬರಿಗೂ ಅಭಿನಂದನೆ ಎಂದು ಟ್ವೀಟ್ ಮೂಲಕ ತಮ್ಮ ಮೆಚ್ಚುಗೆಯನ್ನ ರಜನಿ ವ್ಯಕ್ತಪಡಿಸಿದ್ದಾರೆ.

Exit mobile version