Site icon PowerTV

ವೀರಗಾಸೆ ಸಂಸ್ಕೃತಿಯಲ್ಲಿ ಬೆಳೆದಿದ್ದೇನೆ, ಅವಮಾನ ಮಾಡೋ ಉದ್ದೇಶ ನನ್ನಲ್ಲಿಲ್ಲ; ಡಾಲಿ ಧನಂಜಯ್​

ಬೆಂಗಳೂರು: ಹೆಡ್​ ಬುಷ್​ ಚಿತ್ರದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದಲ್ಲಿ ನಟಿಸಿದ ಡಾಲಿ ಧನಂಜಯ್​ ಪವರ್​ ಟಿವಿಯೊಂದಿಗೆ ಮಾತನಾಡಿದ್ದಾರೆ.

ಈ ಬಗ್ಗೆ ಕೆಲವು ಜನ ವೈಯಕ್ತಿಕವಾಗಿ ಅಟ್ಯಾಕ್ ಮಾಡ್ತಾ ಇದ್ದಾರೆ. ಸಣ್ಣ ಕ್ಲಿಪ್ ಹಂಚಿ ವಿವಾದ ಸೃಷ್ಟಿ ಮಾಡ್ತಿದಾರೆ. ಅದನ್ನು ನಂಬಿ ಮಾತನಾಡಬೇಡಿ ಎಂದರು.

ವೀರಗಾಸೆ ಹೆಡ್​-ಬುಷ್​ ಸಿನಿಮಾದಲ್ಲಿ ಅವಮಾನ ಮಾಡಿದ್ದೇವೆ ಎಂದು ಹೇಳಿದ ಬಗ್ಗೆ ಸ್ವಾಮೀಜಿಗಳ ಹತ್ತಿರ ಮಾತನಾಡಿದ್ದೇನೆ. ಅವರಿಗೆ ಅರ್ಥ ಆಗಿದೆ. ನಾನು ಸಿನಿಮಾದಲ್ಲಿ ವೀರಗಾಸೆಗೆ ಅವಮಾನ ಮಾಡಿರೋರಿಗೆ ಹೊಡೆದಿದ್ದೇನೆ. ದೇವರ ಹೆಸರಲ್ಲಿ ಬಂದ ವಿಲನ್ ಗಳಿಗೆ ಹೊಡೆದಿದ್ದೇನೆ. ಕಿಡಿಗೇಡಿಗಳು ಬೇಕು ಅಂತಾನೆ ಈ ರೀತಿ ವಿವಾದ ಮಾಡಿದ್ದಾರೆ ಎಂದು ತಿಳಿಸಿದರು.

ಈ ರೀತಿಯಲ್ಲಿ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಿದ್ರೆ, ಮುಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ತೋರಿಸೋಕೆ ನಿರ್ಮಾಪಕರು, ನಟರು ಹೆದರುತ್ತಾರೆ. ನಾನು ವೀರಗಾಸೆ ಸಂಸ್ಕೃತಿಯಲ್ಲಿ ಬೆಳೆದು ಬಂದಿದಿನಿ. ಅವಮಾನ ಮಾಡೋ ಉದ್ದೇಶ ನಮಗಿಲ್ಲ. ನಾನು ರಾಜಕೀಯ ಮಾಡೋಕೆ ಬಂದಿಲ್ಲ. ಸಿನಿಮಾ ಮಾಡೋಕೆ ಬಂದಿದಿನಿ. ಸೋಶಿಯಲ್ ಮೀಡಿಯಾ ಇದೆ ಅಂತಾ ಬಾಯಿಗೆ ಬಂದ ಹಾಗೆ ಮಾತಾಡೋದು ಬೇಡ ಎಂದು ಧನಂಜಯ್​ ಮನವಿ ಮಾಡಿದರು.

Exit mobile version