Site icon PowerTV

ಕಾಡುಗೊಲ್ಲರನ್ನ ರಾಹುಲ್ ಗಾಂಧಿ ಬಳಿ ಮಾತನಾಡಲು ಬಿಡದ ಹೆಚ್.ಎಂ ರೇವಣ್ಣ

ಬೆಂಗಳೂರು: ಭಾರತ್ ಜೋಡೊ ಯಾತ್ರೆಯಲ್ಲಿ ಕಾಡುಗೊಲ್ಲರನ್ನ ರಾಹುಲ್ ಗಾಂಧಿ ಬಳಿ ಹೋಗಿ ಸಂವಾದ ನಡೆಸಲು ಹೆಚ್ ಎಂ ರೇವಣ್ಣ ಅವಕಾಶ ಕೊಡಲಿಲ್ಲ ಎಂದು ಕಾಡುಗೊಲ್ಲ ಸಮುದಾಯದ ನಾಗಣ್ಣ ಎಂಬುವವರು ಆರೋಪ ಮಾಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಹೆಚ್.ಎಂ ರೇವಣ್ಣ ರವರು, ಅಲ್ಲಿ ತುಂಬಾ ಜನ ಪ್ರತ್ಯಕ್ಷದರ್ಶಿಗಳಿದ್ದಾರೆ. ನಾವೂ ಆ ರೀತಿಯಾಗಿ ಮಾಡಲಿಲ್ಲ. ಹಿಂದುಳಿದ ಸಮುದಾಯದ ಒಕ್ಕೂಟದಿಂದ ಕೆಲವರಿಗೆ ಮಾತ್ರ ಅವಕಾಶವಿತ್ತು.

ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೇವಾಲಾರವರು ಎಲ್ಲರು ಯಾಕೆ ಅಂದರು, ಹೀಗಾಗಿ ಕೆಲವರನ್ನ ಸಂಘಟನಕಾರರಾಗಿ ನಿಲ್ಲಿಸಿದ್ದೇವು ಅಷ್ಟೇ. ಕಾಡುಗೊಲ್ಲರನ್ನ ಪರ ಹೋರಾಟ ಮಾಡಿದವರು ನಾವು. ಕಾಡುಗೊಲ್ಲರನ್ನ ಎಸ್ ಟಿ ಸಮುದಾಯಕ್ಕೆ ಸೇರಿಸಲು ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದಿದ್ದರು.

ಅವರಲ್ಲಿ ಮಾಜಿ ಸಚಿವೆ ಜಯಮ್ಮರವರಿಗೆ ಎಂಎಲ್ ಸಿ ಮಾಡಿದವರು ಸಿದ್ದರಾಮಯ್ಯ ರವರು. ನಾಗಣ್ಣ ಯಾಕೆ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ, ಈ ಕುರಿತು ಪರಿಶೀಲಿಸುತ್ತೇವೆ ಎಂದು ತಳಿಸಿದರು.

Exit mobile version