Site icon PowerTV

ಹೆಡ್​​ಬುಷ್​​ನಲ್ಲಿ ವೀರಗಾಸೆಗೆ ಅವಮಾನ ಚಿತ್ರತಂಡದ ವಿರುದ್ಧ ದೂರು

ಹೆಡ್​​ಬುಷ್​​ ಚಿತ್ರದಲ್ಲಿ ವೀರಗಾಸೆಗೆ ಅವಮಾನ ಆರೋಪದ ಅಡಿಯಲ್ಲಿ ಹೆಡ್​​ಬುಷ್​​ ಚಿತ್ರತಂಡದ ವಿರುದ್ಧ ದೂರು ದಾಖಲಿಸಲಾಗಿದೆ.

ವೀರಶೈವ ಪುರೋಹಿತ ಮಹಾಸಭಾದಿಂದ ದೂರು ದಾಖಲಾಗಿದ್ದು, ಫಿಲಂ ಚೇಂಬರ್ ವಿರುದ್ಧ​​, ಪೊಲೀಸ್​ ಇಲಾಖೆಗೆ ದೂರು ದಾಖಲಿಸಿದೆ. ಇನ್ನು, ನಟರಾದ ಲೂಸ್​ ಮಾದ, ವಶಿಷ್ಠ ಸಿಂಹ, ದೇವರಾಜ್​, ಧನಂಜಯ್​​​, ನಿರ್ದೇಶಕರ ವಿರುದ್ಧ ದೂರು ದಾಖಲಿಸಿದ್ದು, ಹೆಡ್​​ಬುಷ್​​ ಪ್ರದರ್ಶನ ನಿಲ್ಲಿಸುವಂತೆ ಒತ್ತಾಯ ಮಾಡಲಾಗಿದೆ.

ಅದಲ್ಲದೇ, ವೀರಗಾಸೆ ಕಲಾವಿದನಿಗೆ ಒದೆಯುವ ದೃಶ್ಯ ತೆಗೆಯುವಂತೆ ಕಲಾವಿದರು ಪಟ್ಟು ಹಿಡಿದಿದ್ದು, ಚಿತ್ರತಂಡದ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದು, ಚಿತ್ರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ.

ವಿವಾದ ಏನು..?

1. ವೀರಗಾಸೆ ಪೋಷಾಕು ಧರಿಸಿ ದಾಳಿ ನಡೆಸಿರೋದು
2. ವೀರಗಾಸೆ ಪೋಷಾಕಿನ ಜೊತೆ ಶೂ ಧರಿಸಿರೋದು
3. ವೀರಗಾಸೆ ವೇಷಧಾರಿ ಶೂ, ಚಪ್ಪಲಿ ಧರಿಸಲ್ಲ
4. ಶೂ ಧರಿಸಿರೋದು ವೀರಭದ್ರ ದೇವರಿಗೆ ಅಪಮಾನ

Exit mobile version