Site icon PowerTV

ಹಾಸನಾಂಬೆ ದೇವಿ ಸಾರ್ವಜನಿಕ ದರ್ಶನಕ್ಕೆ ಇಂದು ಕಡೆ ದಿನ..!

ಹಾಸನ: ವರ್ಷಕ್ಕೊಮ್ಮೆ ಭಕ್ತಾಧಿಗಳಿಗೆ ದರ್ಶನ ಭಾಗ್ಯ ನೀಡುವ ಹಾಸನಾಂಬೆ ದೇವಿ ರಾಜ್ಯದೆಲ್ಲೆಡೆ ತನ್ನ ಮಹಿಮೆಯನ್ನು ತೋರುತ್ತಿದ್ದು, ಭಕ್ತಾಧಿಗಳ ದರ್ಶನದ ಸಮಯವನ್ನು ಜಿಲ್ಲಾಡಿತಮಂಡಳಿ ವಿಸ್ತರಿಸಿದೆ.

ಇನ್ನು ದೇವಿಯ ದರ್ಶನಕ್ಕೆ ಇಂದು ಕಡೆಯ ದಿನವಾಗಿದ್ದು, ಭಕ್ತಾದಿಗಳ ಮಹಾಪೂರವೆ ದೇವಸ್ಥಾನದ ಕಡೆ ಹರಿದುಬರುತ್ತಿದೆ. ಬೆಳಿಗ್ಗೆಯಿಂದಲೂ ಹರಿದು ಬರುತ್ತಿರುವ ಭಕ್ತಸಾಗರವನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇಂದು ಕಡೆಯ ದಿನವಾದ್ದರಿಂದ ಹಾಸನಾಂಬೆ ದೇವಿ ದರ್ಶನಕ್ಕೆ ವಿಶೇಷ ಚೇತನ ವ್ಯಕ್ತಿಯನ್ನು ಯುವಕ ಹೊತ್ತು ತಂದಿದ್ದಾನೆ.

ಹಾಸನಾಂಬೆ ದೇವಿ ದರ್ಶನಕ್ಕೆ ಬೆಂಗಳೂರಿನ ಬನ್ನೇರುಘಟ್ಟದಿಂದ ಆಗಮಿಸಿರುವ ವಿಶೇಷ ಚೇತನ ವ್ಯಕ್ತಿ, ಚಿಕ್ಕಪ್ಪನನ್ನು ತನ್ನ ಬೆನ್ನ‌‌ ಮೇಲೆ ಮಗ ಹೊತ್ತು ತಂದಿದ್ದಾನೆ. ಗರ್ಭಗುಡಿವೆರೆಗು ಪೊಲೀಸರು ನೆರವಾಗಿದ್ದಾರೆ.

Exit mobile version