Site icon PowerTV

ಹೊಸ ನೋಟುಗಳ ಮೇಲೆ ಲಕ್ಷ್ಮಿದೇವಿ, ಗಣೇಶನನ್ನ ಮುದ್ರಿಸಿ- ಸಿಎಂ ಕೇಜ್ರಿವಾಲ್ ಒತ್ತಾಯ

ನವದೆಹಲಿ: ಗುಜರಾತ್​ ಚುನಾವಣೆ ಮೇಲೆ ಕಣ್ಣಿಟ್ಟಿರುವ ಎಎಪಿ ಹಿಂದುತ್ವ ಕಾರ್ಡ್​​ ಪ್ಲೇ ಮಾಡಲು ಹೋರಟಿದೆ. ಕರೆನ್ಸಿ ನೋಟಿನಲ್ಲಿ ಗಾಂಧೀಜಿ ಫೋಟೋ ಜತೆ ಗಣೇಶ, ಲಕ್ಷ್ಮೀ ಫೋಟೋ ಹಾಕಬೇಕೆಂಬುದು ನನ್ನ ಬಯಕೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಈ ಬಗ್ಗೆ ಪ್ರಧಾನಿಗೆ ಪತ್ರ ಬರೆಯುವುದಾಗಿಯೂ ಅವರು ಹೇಳಿದ್ದಾರೆ. ಮಹಾತ್ಮಾ ಗಾಂಧಿಯವರ ಫೋಟೋದ ಜತೆಗೆ ಗಣೇಶ ಮತ್ತು ಲಕ್ಷ್ಮಿ ದೇವರ ಫೋಟೋಗಳಿರುವ ಕರೆನ್ಸಿ ನೋಟುಗಳಲ್ಲಿ ಹಾಕುವಂತೆ ಕೇಂದ್ರಕ್ಕೆ ಮನವಿ ಮಾಡುವೆ . ನಮ್ಮ ದೇಶದಲ್ಲಿ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದರಿಂದ ಭಾರತದ ಆರ್ಥಿಕತೆಯು ಬಿಕ್ಕಟ್ಟಿನಲ್ಲಿದೆ. ಆರ್ಥಿಕತೆಯನ್ನು ಸುಧಾರಿಸಲು ಹಲವಾರು ಕ್ರಮಗಳಿವೆ. ಇದರಲ್ಲಿ ಹೆಚ್ಚಿನ ಶಾಲೆಗಳು, ಆಸ್ಪತ್ರೆಗಳನ್ನು ನಿರ್ಮಿಸುವುದು ಮತ್ತು ದೇಶದಲ್ಲಿ ಮೂಲಸೌಕರ್ಯವನ್ನು ಸುಧಾರಿಸುವುದು ಸೇರಿವೆ ಎಂದು ಕೇಜ್ರಿವಾಲ್ ಹೇಳಿದರು.

ಭಾರತೀಯ ರಿವರ್ಸ್ ಬ್ಯಾಂಕ್ ಮುದ್ರಿಸುವ ಹೊಸ ನೋಟುಗಳ ಮೇಲೆ ಇನ್ಮುಂದೆ ಲಕ್ಷ್ಮಿ ದೇವಿ ಮತ್ತು ಗಣೇಶನ ಫೋಟೋಗಳನ್ನು ಮುದ್ರಿಸಬೇಕು, ಇದರಿಂದ ದೇಶದ ಏಳಿಗೆಗೆ ಸಹಾಯವಾಗುತ್ತದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಒತ್ತಾಯಿಸಿದ್ದಾರೆ.

ಒಂದು ವೇಳೆ ನೋಟುಗಳಲ್ಲಿ ದೇವರ ಚಿತ್ರ ಇದ್ದರೆ, ಇಡೀ ದೇಶವೇ ಆಶೀರ್ವದಿಸಲಿದೆ. ಲಕ್ಷ್ಮೀ ದೇವಿ ಸಮೃದ್ಧಿಯ ಸಂಕೇತ, ಗಣೇಶ ವಿಘ್ನ ನಿವಾರಕನಾಗಿದ್ದಾನೆ” ಎಂಬುದಾಗಿ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

Exit mobile version