Site icon PowerTV

ತುಮಕೂರಿನ ಐತಿಹಾಸಿಕ ದೇವಾಲಯಗಳು ಬಂದ್

ತುಮಕೂರು : ಇದೇ ಮೊದಲ ವರ್ಷ ದೀಪಾವಳಿಯ ದಿನ ಸೂರ್ಯಗ್ರಹಣ ಬಂದಿದೆ. ನಾಡಿನಾದ್ಯಂತ ಕೇತುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆ, ಅನೇಕ ದೇವಾಲಯಗಳನ್ನು ಬಂದ್ ಮಾಡಲಾಗಿದೆ, ಹಾಗೆಯೇ ಇಂದು ತುಮಕೂರಿನ ಐತಿಹಾಸಿಕ ದೇವಾಲಯಗಳನ್ನು ಬಂದ್ ಮಾಡಲಾಗಿದೆ.

ಇನ್ನು, ಜಿಲ್ಲೆಯ ಯಡಿಯೂರು, ಸಿದ್ದರಬೆಟ್ಟ, ದೇವರಾಯನದುರ್ಗ, ಗೊರವನಹಳ್ಳಿ ದೇವಾಲಯಗಳು ಬಂದ್ ಆಗಲಿವೆ. ದೇವಾಲಯ ಆಡಳಿತ ಮಂಡಳಿಯವರು ಸೂರ್ಯಗ್ರಹಣ ಹಿನ್ನೆಲೆ ದರ್ಶನ ಬಂದ್ ಮಾಡಿದ್ದಾರೆ. ಸೂರ್ಯಗ್ರಹಣದ ಬಳಿಕ ದೇವಾಲಯ ತೆರೆದು ಶುದ್ಧಿಗೊಳಿಸುವ ಸಾಧ್ಯತೆಗಳಿವೆ. ತದನಂತರ ಎಂದಿನಂತೆ ಪೂಜೆ ಪುನಸ್ಕಾರ ನಡೆಯಲಿವೆ.

Exit mobile version