Site icon PowerTV

ಹಿಂದು ಕಾರ್ಯಕರ್ತ ಹರ್ಷ ಸಹೋದರಿ ಮೇಲೆ ಜೀವ ಬೆದರಿಕೆ​; ಮೂವರ ಬಂಧನ

ಶಿವಮೊಗ್ಗ; ಜಿಲ್ಲೆಯ ಸೀಗೆಹಟ್ಟಿ ಮತ್ತು ಭರ್ಮಪ್ಪ ನಗರದಲ್ಲಿ ಅನ್ಯಕೋಮಿನ ಯುವಕರ ದಾಂಧಲೆ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಮೂವರು ಯುವಕರನ್ನ ಬಂಧಿಸಿದ್ದಾರೆ.

ಮಾರ್ಕೆಟ್ ಫೌಜಾನ್ (22), ಅಜ್ಹರ್ ಅಲಿಯಾಸ್ ಅಜ್ಜು (21), ಫರಾಜ್ ಬಂಧಿತರು, ನಿನ್ನೆ ರಾತ್ರಿ 2 ಬೈಕ್ ಗಳಲ್ಲಿ ಬಂದು ದಾಂಧಲೆ ಮಾಡಿದ್ದ ಈ ಮೂವರು ಪುಂಡರು ಹಲವರಿಗೆ ಜೀವ ಬೆದರಿಕೆ ಹಾಕಿದ್ದರು.

ಈ ಮೂವರ ವಿರುದ್ಧ ಈ ಹಿಂದೆ ಅನೇಕ ಪ್ರಕರಣಗಳು ದಾಖಲಾಗಿದ್ದು, ಮಾರ್ಕೆಟ್ ಫೌಜಾನ್ ಮೇಲೆ ಈ ಹಿಂದೆ 5 ಪ್ರಕರಣಗಳು, ಅಜ್ಹರ್ ಮೇಲೆ 3 ಪ್ರಕರಣ, ಫರಾಜ್ ಮೇಲೆ 4 ಕೇಸುಗಳು ದಾಖಲು ಜಿಲ್ಲೆಯಲ್ಲಿ ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿಗೆ ಹತ್ಯೆಯಾದ ಹಿಂದು ಕಾರ್ಯಕರ್ತ ಹರ್ಷ ಅವರ ನಿವಾಸದ ಮುಂದೆ ಬಂದು ನಿಮ್ಮನ್ನು ಹತ್ಯೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಅಲ್ಲದೇ, ನಿನ್ನೆ ರಾತ್ರಿ ಮಚ್ಚು, ಲಾಂಗುಗಳನ್ನು ಹಿಡಿದು ಹಲವರಿಗೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ದುಷ್ಕಿರ್ಮಿಗಳ ಕೈಗೆ ಸಿಕ್ಕ ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ಈ ಆರೋಪಿಗಳು ಹಲ್ಲೆ ನಡೆಸಿದ್ದರು.

Exit mobile version