Site icon PowerTV

ಮೇಕಪ್ ಮ್ಯಾನ್‌ಗೆ ಚೆಲ್ಲಾಟ, ನಟಿಗೆ ಪ್ರಾಣ ಸಂಕಟ

ಬೆಂಗಳೂರು : ಸ್ಯಾಂಡಲ್ವುಡ್​​ನ ಖ್ಯಾತ ನಟನ ಜೊತೆ ನಟಿಸಿದ್ದ ನಾಯಕಿಗೆ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ನಟಿಯ ಅಶ್ಲೀಲ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪಿ, ನಟಿಯ ಬಳಿಯೇ ಮ್ಯಾಕಪ್ ಮ್ಯಾನ್ ಆಗಿದ್ದ. ಸಿನಿಮಾ ನಟಿಗೆ ಬ್ಲಾಕ್ ಮೇಲ್ ಮಾಡಿರೊ ಅರೋಪಿ ಮಹಂತೇಶ್ ಒರ್ವ ಮೇಕಪ್ ಮೆನ್‌ ಆಗಿದ್ದ.

ಇನ್ನು, ಮೇಕಪ್ ಮೆನ್ ಮಹಂತೇಶ್​​ಗೆ ನಟಿಯ ಮೊಬೈಲ್​​ನಲ್ಲಿ ಟ್ಯಾಂಗೋ ಆಪ್ ಇರೋದು ಗೊತ್ತಾಗಿದೆ. ಈ ವೇಳೆ ಆಕೆ ಐಡಿ ಹುಡುಕಿ ವಿಡಿಯೋ ನೋಡಿದ್ದಾನೆ. ನಟಿ ಟ್ಯಾಂಗೋದಲ್ಲಿ ಇರೋದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಹೊಸ ಮೊಬೈಲ್ ನಂಬರ್ ಖರೀದಿ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾನೆ. ಸದ್ಯ ನಟಿ ನೀಡಿದ ದೂರಿನ ಅನ್ವಯ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

Exit mobile version