Site icon PowerTV

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ ಸಚಿವ ಆರ್ ಅಶೋಕ್

ಬೆಂಗಳೂರು: ಎಸ್​ಸಿ, ಎಸ್​ಟಿ ಮೀಸಲಾತಿ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆ ವಿಚಾರ ಹಿನ್ನೆಲೆಯಲ್ಲಿ ಸಚಿವ ಆರ್ ಅಶೋಕ್ ರವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ  ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾಧ್ಯಮದವರೆದುರು ಮಾತನಾಡಿದ ಸಚಿವ ಅಶೋಕ್ ಅವರು, ಸಿದ್ದರಾಮಯ್ಯ ಕಂಪನಿ ನಾಟಕ ಕಂಪನಿ. ಈಗಾಗಲೇ ಭಾರತ ಚೋಡೋ ಪಾದಯಾತ್ರೆ ಮಾಡಿ. ನಾಟಕ ಕಂಪನಿ ಬಣ್ಣ ಬದಲಾಗಿದೆ. ಬಸ್ಕಿ ಹೊಡೆಯೋದು, ಕೈ ಹಿಡಿದು ಓಡೋದು ಮಾಡಿದ್ದಾರೆ.

ಅವರದ್ದು ನಿಜವಾಗಿ ನಾಟಕ ಕಂಪನಿ. ನಾಗಮೋಹನ್ ದಾಸ್ ಕಮಿಟಿ ಸಿದ್ದರಾಮಯ್ಯ ಮಾಡಿದ್ದಲ್ಲ, ಕುಮಾರಸ್ವಾಮಿ ಅವರು ಮಾಡಿದ್ದು. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯಗೆ ಆಗಲ್ಲ, ಎಣ್ಣೆ-ಸಿಗೇಕಾಯಿ. ಸುಮಾರು 15 ವರ್ಷಗಳಿಂದ ಅವರಿಗೆ ಪರಸ್ಪರ ಆಗುವುದಿಲ್ಲ.

ತಮ್ಮ ಅವಧಿಯಲ್ಲಿ ಎನು ಮಾಡಿದ್ರು ಅನ್ನೋದು ಸಿದ್ದರಾಮಯ್ಯ ಹೇಳಬೇಕಲ್ವಾ.? ಜೇನು ಗೂಡಿಗೆ ಕಲ್ಲು ಹೊಡೆಯುವ ಕೆಲಸ ಮಾಡ್ತಿದ್ದೀರಾ ಅಂತ ಕಾಂಗ್ರೆಸ್ ನವರು ಹೇಳಿದ್ದಾರೆ.  ಮೀಸಲಾತಿ ಕೊಡುವ ಕೆಲಸ ಬಿಜೆಪಿ ಮಾಡಿ ತೋರಿಸಿದೆ‌. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳಿಕೆ ನೀಡಿದ್ದಾರೆ.

Exit mobile version