Site icon PowerTV

ಶಿವಮೊಗ್ಗದಲ್ಲಿ ಶಾಂತಿ ಭಂಗ ಮಾಡಿದವರ ವಿರುದ್ಧ ಸೂಕ್ತ ಕ್ರಮ; ಗೃಹ ಸಚಿವ

ಶಿವಮೊಗ್ಗ; ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ನಿನ್ನೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಆಯನೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದಾರೆ.

ಶಿವಮೊಗ್ಗದ ಎರಡು ಭಾಗದಲ್ಲಿ ನಿನ್ನೆ ಸಣ್ಣ ಪುಟ್ಟ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಇತ್ತಿಚೆಗೆ ಸ್ವಲ್ಪ ದಿನಗಳಲ್ಲಿ ಶಾಂತಿಯುತವಾಗಿತ್ತು. ನಿನ್ನೆಯಿಂದ ಶಾಂತಿ ಭಂಗವಾಗುವ ಸೂಚನೆಗಳಿವೆ.

ಈ ಘಟನೆ ಬಗ್ಗೆ ಸೂಕ್ತವಾದ ತನಿಖೆ ನಡೆಯಲಿದೆ. ಯಾರು ಆರೋಪಿಗಳಿದ್ದಾರೆ, ಅವರನ್ನು ಕರೆತಂದು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು.

ನಿನ್ನೆ ತಡರಾತ್ರಿ ಹತ್ಯೆಯಾದ ಹಿಂದು ಮುಖಂಡ ಹರ್ಷ ಅವರ ಸಹೋದರಿ ಅಶ್ವಿನಿ ಮನೆಯ ಮುಂದೆ ಕೆಲವು ದುಷ್ಕರ್ಮಿಗಳು ದಾಳಿ ನಡೆಸಿ ಲಾಂಗು, ಮಚ್ಚುಗಳಿಂದ ಸಿಕ್ಕ ಸಿಕ್ಕ ವಾಹನಗಳ ಮೇಲೆ ಬಿಸಿದ್ದರು. ಅಲ್ಲದೇ, ಪ್ರಶಾಂತ ಎಂಬ ಯುವಕನ ಮೇಲೆ ಇಟ್ಟಿಗೆಯಿಂದ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ್ದರು.

Exit mobile version