Site icon PowerTV

ಪಟಾಕಿ ಅವಘಡ 11 ಪ್ರಕರಣ ದಾಖಲು

ಬೆಂಗಳೂರು : ನಾಡಿನಾದ್ಯಂತ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಈ ಬಾರಿ ದೀಪಾವಳಿಯಲ್ಲೂ ಕೂಡ ಪಟಾಕಿ ಅವಘಡ ಸಂಭವಿಸಿದೆ.

ಇದುವರೆಗೆ ಪಟಾಕಿ ಅವಘಡದಿಂದ 11 ಪ್ರಕರಣ ದಾಖಲಾಗಿದೆ. ವೈದ್ಯರು ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 24 ಗಂಟೆ ಸೇವೆ ನೀಡುತ್ತಿದ್ದಾರೆ. ಪ್ರಕರಣಗಳಿಗೆ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡುತ್ತಿದ್ದಾರೆ. ಯಾರೋ ಸಿಡಿಸಿದ ಪಟಾಕಿ ಯಿಂದ ಕೆಲವರಿಗೆ ಗಾಯವಾಗಿದೆ.

ಇನ್ನು, ಹಲವರು ಬಿಜಲಿ ಪಟಾಕಿ ಹಾಗೂ ಪ್ಲವರ್ ಪಾಟ್ ಪಟಾಕಿಯಿಂದ ಗಾಯಗೊಂಡಿದ್ದಾರೆ. ನೆನ್ನೆ ರಾತ್ರಿ 6 ಜನ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

Exit mobile version