Site icon PowerTV

ಭಾರತೀಯರ ಜತೆ ಸೇರಿ ದೀಪಾವಳಿ ಹಬ್ಬ ಆಚರಿಸಿದ ಅಮೆರಿಕಾ ಅಧ್ಯಕ್ಷ

ಅಮೆರಿಕಾ; ಶ್ವೇತಭವನದಲ್ಲಿ ದೀಪ ಬೆಳಗಿಸುವ ಮೂಲಕ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್‌ ದೀಪಾವಳಿ ಸಂಭ್ರಮಾಚರಣೆ ಮಾಡಿದ್ದಾರೆ.

ದೇಶದಲ್ಲೆಡೆ ದೀಪಾವಳಿ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಅದರಂತೆ ಅಮೆರಿಕಾ ಅಧ್ಯಕ್ಷ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಅವರ ಪತ್ನಿ, ಭಾರತೀಯ ಪ್ರಜೆಗಳು ಸೇರಿ ದೀಪ ಬೆಳಗಿಸಿ ದೀಪಾವಳಿ ಹಬ್ಬ ಆಚರಿಸಿದರು.

ಬೈಡನ್​ ಆಚರಣೆ ಮಾಡಿದ ದೀಪಾವಳಿ ಹಬ್ಬ ಶ್ವೇತಭವನದಲ್ಲಿ ಆಚರಿಸಲಾಗುತ್ತಿರುವ ಇದುವರೆಗಿನ ಅತಿ ದೊಡ್ಡ ದೀಪಾವಳಿ ಹಬ್ಬವಾಗಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ವೇಳೆ ಜಾರ್ಜ್‌ ಬುಷ್‌ ದೀಪಾವಳಿ ಆಚರಣೆಯ ನಂತರ ಈ ಬಾರಿಯ ದೀಪಾವಳಿ ಅತೀ ದೊಡ್ಡ ಕಾರ್ಯಕ್ರಮವಾಗಿದೆ.

ಏಷ್ಯಾದ ಪ್ರಜೆಗಳಿಗೆ, ಪ್ರತಿಯೊಬ್ಬರಿಗೂ ಪ್ರಯೋಜನದಾಯಕವಾದ ನಮ್ಮ ಈ ಆರ್ಥಿಕತೆಯನ್ನು ಕಟ್ಟುವಲ್ಲಿ ದೊಡ್ಡ ದೇಣಿಗೆ ನೀಡಿದೆ ಎಂದು ಈ ವೇಳೆ ಬೈಡೆನ್‌ ತಮ್ಮ ಭಾಷಣದಲ್ಲಿ ಹೇಳಿದರು.

Exit mobile version