Site icon PowerTV

‘ಮುಂದಿನ ಸಿಎಂ ಕುಮಾರಣ್ಣ ಆದ್ರೆ ಸಂತೋಷ’ : ಚಿದಾನಂದಗೌಡ

ತುಮಕೂರು :  ಶಿರಾ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ನಡೆದ ಕುಂಚಿಟಿಗ-ಒಕ್ಕಲಿಗ ಸಮಾವೇಶದಲ್ಲಿ ಬಿಜೆಪಿ ಎಂಎಲ್ಸಿ ಚಿದಾನಂದಗೌಡ ಅವರು ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದ್ರೆ ಮೊದಲು ಖುಷಿ ಪಡೋನು ನಾನು ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸ್ವತಃ ಚಿದಾನಂದಗೌಡ ಅವರು ಹೆಚ್.ಡಿ ಕುಮಾರಸ್ವಾಮಿ ಹಾಗೂ ನಂಜಾವಧೂತ ಸ್ವಾಮೀಜಿ ಎದುರಲ್ಲಿ ಹೇಳಿಕೆ ನೀಡಿದ್ದು, ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಆದ್ರೆ ಸಂತೋಷ ಪಡೋದ್ರಲ್ಲಿ ನಾನೂ ಕೂಡ ಒಬ್ಬ, ನಮ್ಮ ಸಮುದಾಯವನ್ನ ಕೇಂದ್ರದಲ್ಲೂ ಕೂಡ ಒಬಿಸಿ ಪಟ್ಟಿಗೆ ಸೇರಿಸಬೇಕು ಹಾಗೂ ಯಾರೇ ಸಿಎಂ ಆದ್ರೂ ನಮ್ಮ ಸಮುದಾಯವನ್ನ ಒಬಿಸಿ ಪಟ್ಟಿಗೆ ಸೇರಿಸಬೇಕು ಅಂತಾ ಬಿಜೆಪಿ ಎಂಎಲ್ಸಿ ಚಿದಾನಂದಗೌಡ ಹೇಳಿಕೆ ನೀಡಿದ್ದಾರೆ.

Exit mobile version