Site icon PowerTV

ಅಭಿಮಾನಿಗಳಿಂದ ಅಪ್ಪು ಪುಣ್ಯ ಸ್ಮರಣೆ

ಶಿವಮೊಗ್ಗ : ನಗರದ ವಿದ್ಯಾ ನಗರದಲ್ಲಿ ನಟ ದಿ. ಪುನೀತ್ ರಾಜ್ ಕುಮಾರ್ ಪುಣ್ಯ ಸ್ಮರಣೆಯನ್ನು ಅಭಿಮಾನಿಗಳು ಆಚರಿಸಿದರು.

ಪುಣ್ಯಸ್ಮರಣೆ ಸಲುವಾಗಿ ಅಭಿಮಾನಿಗಳಿಗೆ ಬಾಡೂಟ ಮಾಡಿಸಲಾಗಿತ್ತು. ಅಪ್ಪು ಅಭಿಮಾನಿಗಳಿಂದ ಅಗಲಿದ‌ ಪುನೀತ್ ರಾಜ್ ಕುಮಾರ್ ನೆನಪು ಸದಾ ಕಾಡುತ್ತಿರುತ್ತದೆ. ಅಪ್ಪು ಅಭಿಮಾನಿಗಳು 400 ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ ವಿತರಿಸಿದ್ದಾರೆ.

ವಿದ್ಯಾನಗರದ ಮುಖ್ಯ ರಸ್ತೆಯಲ್ಲಿ ಪುನಿತ್ ಅಭಿಮಾನಿಗಳಿಂದ ಮಂಟಪ ನಿರ್ಮಾಣ ಮಾಡಲಾಗಿತ್ತು. ಮಂಟಪಕ್ಕೆ ಹೂವಿನ ಅಲಂಕಾರ ಮಾಡಿ, ಅಪ್ಪು ಫೋಟೊ ಇಟ್ಟು ಫೋಟೊಗೆ ಪೂಜೆ ಸಲ್ಲಿಸಿ ಎಡೆ ಇಟ್ಟಿದ್ರು. ವಿದ್ಯಾನಗರ ಪುನೀತ್ ಅಭಿಮಾನಿಗಳು 2 ಸಾವಿರ ಜನರಿಗೆ ಅನ್ನಸಂತಾರ್ಪಣೆ ನೆರವೇರಿಸಿದ್ರು. ಪುನೀತ್ ಗೆ ಪ್ರಿಯವಾದ ನಾಟಿ ಕೋಳಿ ಸಾರು ಮಾಡಿ ಎಡೆಗೆ ಆರ್ಪಿಸಿದ್ರು. 2 ಕುರಿಗಳು, 1,500 ಮೊಟ್ಟೆ ಹಾಗೂ 200 ಕೆಜಿ ಚಿಕನ್‌ ಬಳಸಿ ಅಡುಗೆ ತಯಾರಿ ಮಾಡಿ ಬಹಳ ಅದ್ಧೂರಿಯಾಗಿ ಅಪ್ಪು ಪುಣ್ಯಸ್ಮರಣೆ ಮಾಡಿದ್ರು.

Exit mobile version