Site icon PowerTV

ನಿನ್ನೆ ಹಾಕಿದ ಸವಾಲ್​ನಂತೆ, ಹಾಸನಾಂಬೆಯ ದರ್ಶನ ಪಡೆದ ಶಾಸಕ ನಾಗೇಂದ್ರ

ಹಾಸನ: ನಿನ್ನೆ ಹಾಸನಾಂಬೆ ದೇವಿ ದರ್ಶನಕ್ಕೆ ಬಂದು ದರ್ಶನ ಸಿಗದೆ ವಾಪಸ್ ಆಗಿದ್ದ ಮೈಸೂರು ಜಿಲ್ಲೆಯ ಚಾಮರಾಜ ಮತಕ್ಷೇತ್ರದ ಬಿಜೆಪಿ ಶಾಸಕ ಎಲ್ ನಾಗೇಂದ್ರ ಅವರು ಇಂದು ದೇವಿಯ ದರ್ಶನ ಪಡೆದರು.

ನಿನ್ನೆ ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ದರ್ಶನಕ್ಕೆ ವ್ಯವಸ್ಥೆ ಮಾಡಲಿಲ್ಲ ಎಂದು ಸಿಟ್ಟಿಗೆದ್ದು ವಾಪಸ್ ಹೋಗಿದ್ದರು. ಇಂದು ತಮ್ಮ ಆಪ್ತರ ಜೊತೆ ಆಗಮಿಸಿದ ಶಾಸಕ ನಾಗೇಂದ್ರ ಅವರು ತಮ್ಮ ಶಕ್ತಿ ದೇವತೆ ದರ್ಶನ ಪಡೆಯುವ ಮೂಲಕ ಪ್ರೀತಂಗೌಡ ಅವರಿಗೆ ಸೆಡ್ಡು ಹೊಡೆದರು.

ಶಾಸಕ ಎಲ್​ ನಾಗೇಂದ್ರ ನಿನ್ನೆ ನೈವೇದ್ಯದ ವೇಳೆ ಬಂದಿದ್ದರಿಂದ ದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಸಿಟ್ಟಿಗೆದ್ದು ಶಾಸಕ ಪ್ರೀತಂಗೌಡ ವಿರುದ್ದ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಅಲ್ಲದೇ, ಮತ್ತೆ ಜಿಲ್ಲಾಡಳಿತದ ಕಡೆಯಿಂದ ದರ್ಶನ ಪಡೆಯಲು ಬರ್ತೇನೆ ಎಂದು ಆವಾಜ್​ ಹಾಕಿ ನಾಗೇಂದ್ರ ಹೋಗಿದ್ದರು.

ಅವರು ಹೇಳಿದಂತೆ ಇಂದು ಜಿಲ್ಲಾಡಳಿತ ಕಡೆಯಿಂದ ಶಿಷ್ಟಾಚಾರ ಪ್ರಕಾರವೇ ಹಾಸನಾಂಬೆ ದೇವಿ ದರ್ಶನಕ್ಕೆ ನಾಗೇಂದ್ರ ಬಂದರು. ಇನ್ನು ನಾಗೇಂದ್ರ ಬರೋ ವಿಚಾರ ತಿಳಿದು ಕಾದು ನಿಂತು ನಾಗೇಂದ್ರರನ್ನ ಶಾಸಕ ಪ್ರೀತಂಗೌಡ ಸ್ವಾಗತ ಮಾಡಿದರು. ನಾಗೇಂದ್ರ ರನ್ನು ತಬ್ಬಿ ಹಾಸನಾಂಬೆ ದೇಗುಲಕ್ಕೆ ಸ್ವಾಗತ ಮಾಡಿದರು. ನಿನ್ನೆ ತಮ್ಮ ವಿರುದ್ಧ ಮಾತನಾಡಿದ್ದ ತಮ್ಮದೇ ಪಕ್ಷದ ಶಾಸಕನನ್ನು ಆತ್ಮೀಯವಾಗಿ ಬರಮಾಡಿಕೊಂಡರು.

Exit mobile version