Site icon PowerTV

ಫ್ಲೈ ಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವು

ಬೆಂಗಳೂರು: ಬೊಮ್ಮನಹಳ್ಳಿ‌ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆ ಹೋಗುತ್ತಿದ್ದ ವೇಳೆಯಲ್ಲಿ ಫ್ಲೈ ಓವರ್ ಮೇಲಿಂದ ಬಿದ್ದು ಬೈಕ್ ಸವಾರನೊಬ್ಬ ಸಾವನ್ನೊಪ್ಪಿದ ಘಟನೆ ನಡೆದಿದೆ.

ಕೌರಿ ನಾಗಾರ್ಜುನ (33) ಸಾವನ್ನಪ್ಪಿದ ಬೈಕ್ ಸವಾರ, ಆಂಧ್ರ ಪ್ರದೇಶ ಮೂಲದ ಕುರಿ ನಾಗಾರ್ಜುನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮಧ್ಯಾಹ್ನ ಬೊಮ್ಮನಹಳ್ಳಿ‌ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆ ಹೋಗ್ಬೇಕಾದ್ರೆ ಈ ಘಟನೆ ನಡೆದಿದೆ.

ಕುರಿ ನಾಗಾರ್ಜುನ್ ಅಜಾಗರೂಕತೆಯಿಂದ ‌ಬೈಕ್ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ. ನಿಯಂತ್ರಣ ತಪ್ಪಿ‌ ತಡೆಗೋಡೆಗೆ ಬೈಕ್ ಗುದ್ದಿದ ಪರಿಣಾಮವಾಗಿ ಫ್ಲೈ ಓವರ್ ಮೇಲಿಂದ ಬಿದ್ದು ಸವಾರ ಸ್ಥಳದಲ್ಲಿ ಸವಾನ್ನಪಿದ್ದಾನೆ. ಈ ಘಟನೆ ಕುರಿತು ಎಲೆಕ್ಟ್ರಾನಿಕ್ ಸಿಟಿ ಸಂಚಾರ ‌ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version