Site icon PowerTV

18 ಲಕ್ಷ ದೀಪೋತ್ಸವ ಆಚರಣೆಗೆ ಪ್ರಧಾನಿ ಮೋದಿ ಚಾಲನೆ

ಅಯೋಧ್ಯೆ; ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 18 ಲಕ್ಷ ದೀಪೋತ್ಸವ ಹಣತೆಗಳಿಗೆ ಬೆಳಗಿಸುವುದಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಚಾಲನೆ ನೀಡಿದರು.

ಅಯೋಧ್ಯೆಯ ಸರಯೂ ನದಿ ತಡದಲ್ಲಿ ನಡೆಯುತ್ತಿರು ಈ ದೀಪೋತ್ಸವ ಬೆಳಗಿಸುವುದಕ್ಕೆ ಇಂದಿನಿಂದ ನಾಲ್ಕು ದಿನ ಆಚರಣೆ ನಡೆಯಲಿದೆ. 18 ಲಕ್ಷ ದೀಪೋತ್ಸವ ಮೋದಿ ಚಾಲನೆ ನೀಡಿರುವುದು ಗಿನ್ನಿಸ್​ ದಾಖಲೆ ಆಗಲಿದೆ.

ಅಲ್ಲಿಂದ ದೇಶದ ಜನರಿಗೆ ದೀಪಾವಳಿ ಶುಭಾಶಯ ಕೋರಿದ ಮೋದಿ, ದೀಪೋತ್ಸವದಲ್ಲಿ, ನಾವು ಭಗವಾನ್ ರಾಮನಿಂದ ಕಲಿಯುವ ನಮ್ಮ ಸಂಕಲ್ಪವನ್ನು ಪುನರಾವರ್ತಿಸಬೇಕಾಗಿದೆ. ರಾಮನನ್ನು ಮರ್ಯಾದಾ ಪುರುಷೋತ್ತಮ್ ಎಂದು ಕರೆಯಲಾಗುತ್ತದೆ.

ನನ್ನ ಮನಸ್ಸಿನಲ್ಲಿ ರಾಮನ ಕಡೆ ಭಕ್ತಿ ಹೆಚ್ಚಾಗುತ್ತಿದೆ.  ರಾಮ ತೋರಿದ ಹಾದಿ ಕಾಣುತ್ತಿದೆ. ರಾಮನ ಆದರ್ಶಗಳು ನಮ್ಮ ಜೀವನದ ಭಾಗವಾಗಿವೆ. ಇಂದು ಕೂಡ ರಾಮನ ಆದಶಗಳು ಜಿವಂತವಾಗಿವೆ. ಈಗ ಅಯೋಧ್ಯೆ ಲಕ್ಷ ದ್ವೀಪದಿಂದ ಬೆಳಗುತ್ತಿದೆ ಎಂದರು.

Exit mobile version