Site icon PowerTV

ಚಿಕಿತ್ಸೆ ಫಲಿಸದೆ ವಿದ್ಯಾರ್ಥಿನಿ ಕೊನೆಯುಸಿರು

ಬೆಂಗಳೂರು : ವಿವಿ ಬಳಿ ವಿದ್ಯಾರ್ಥಿನಿ ಮೇಲೆ BMTC ಬಸ್‌ ಹರಿದ ಘಟನೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾರೆ.

21 ವರ್ಷದ ಶಿಲ್ಪಾ ಶ್ರೀ ಸಾವನ್ನಪ್ಪಿದ್ದಾಳೆ. ಬೆಂಗಳೂರು ವಿವಿಯಲ್ಲಿ ಗಣಿತಶಾಸ್ತ್ರ ವಿಭಾಗದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದ ಶಿಲ್ಪಾ BMTC ಬಸ್‌ ಹತ್ತುವಾಗ ಏಕಾಏಕಿ ಬಸ್​ ಮುಂದಕ್ಕೆ ಚಲಿಸಿದ್ದ ಕಾರಣ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು.

ಅದಲ್ಲದೇ ಕಳೆದ 13 ದಿನಗಳಿಂದ ಬನ್ನೆರುಘಟ್ಟ ರಸ್ತೆಯ ಪೊರ್ಟಿಸ್​ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ವಿದ್ಯಾರ್ಥಿನಿ0ಯ ಸೊಂಟದ ಬಳಿ ಗಂಭೀರ ಗಾಯವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾರೆ.

Exit mobile version