Site icon PowerTV

‘ಸ್ಟೇಜ್ ಮೇಲೆ ಅವಕಾಶ ಕೊಡಿ’ ಅಂತ ಕಿಡಿಕಾರಿದ ನಟಿ ರಮ್ಯಾ

ರಾಯಚೂರು; ರಾಜಕೀಯದಿಂದ ಇಷ್ಟು ವರ್ಷ ದೂರು ಉಳಿದಿದ್ದ ಮೋಹಕ ತಾರೆ, ಮಾಜಿ ಸಂಸದೆ ನಿನ್ನೆ ದಿಢೀರಾಗಿ ರಾಯಚೂರಿನಲ್ಲಿ ಭಾರತ್​ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಜತೆಗೆ ಹಜ್ಜೆ ಹಾಕಿದರು. ಈ ವೇಳೆ ನನಗೂ ವೇದಿಕೆ ಮೇಲೆ ಅವಕಾಶ ನೀಡಿ ಅಂತ ರಮ್ಯಾ ಭಾರತ್​ ಜೋಡೋ ಯಾತ್ರೆ ಆಯೋಜಕರ ವಿರುದ್ಧ ಕಿಡಿಕಾರಿದ್ದಾರೆ.

ರಾಯಚೂರು ನಗರದ ಬಸವೇಶ್ವರ ವೃತ್ತದ ಬಳಿಯ ಮೈದಾನದಲ್ಲಿ ನಿನ್ನೆ ರಾತ್ರಿ ರಾಹುಲ್ ಗಾಂಧಿ ಕಾರ್ನರ್ ಮೀಟಿಂಗ್ ವೇಳೆ ಈ ಘಟನೆ ನಡೆದಿದೆ. ರಾಹುಲ್​ ಗಾಂಧಿ ಅವರ ಕಾರ್ನರ್ ಮೀಟಿಂಗ್ ವೇಳೆ ರಮ್ಯಾಗೆ ಭದ್ರತಾ ಸಿಬ್ಬಂದಿ ಎಂಟ್ರಿ ಕೊಡದ ಹಿನ್ನಲೆಯಲ್ಲಿ ನಟಿ ರಮ್ಯಾಗೆ ಸ್ಟೇಜ್ ನಲ್ಲಿ ಕೂರಲು ಅವಕಾಶ ನಿರಾಕರಿಸಿದ್ದರು.

ಭದ್ರತಾ ಸಿಬ್ಬಂದಿಗೆ ಎಷ್ಟೇ ಮನವಿ ಮಾಡಿದ್ರೂ ರಮ್ಯಾ ಭದ್ರತಾ ಸಿಬ್ಬಂದಿ ಹಾಗೂ ರಾಯಚೂರಿನ ಮುಖಂಡರನ್ನ ತರಾಟೆಗೆ ತೆಗೆದುಕೊಂಡರು. ಅವಕಾಶ ನೀಡದ ಭದ್ರತಾ ಸಿಬ್ಬಂದಿಗಳ ವಿರುದ್ಧ ಆಕ್ರೋಶಗೊಂಡು ಕೆಲ ಹೊತ್ತು ರಮ್ಯಾ ತಡಕಾಡಿದರು.

Exit mobile version