Site icon PowerTV

ಕಾಂಗ್ರೆಸ್ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ : ಸಿದ್ದರಾಮಯ್ಯ

ರಾಯಚೂರು : SC, STಯವರಿಗೆ ಜಾತಿ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಬೇಕು. ಅದಕ್ಕಾಗಿ ಈಗಿರುವ ಮೀಸಲಾತಿ ಹೆಚ್ಚಿಸಬೇಕು ಅನ್ನೋ ಹೋರಾಟ ಬಹಳ ದಿನಗಳಿಂದ ಇತ್ತು.

ಪ್ರೀಯಾಂಕ್ ಖರ್ಗೆ ಸಮಾಜ ಕಲ್ಯಾಣ ಇಲಾಖೆ ಮಂತ್ರಿ ಆಗಿದ್ದಾಗ ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ರು. ರಾಯಚೂರಿನಲ್ಲಿ ಮಾತನಾಡಿದ ಅವರು, ನಾಗಮೋಹನ್ ದಾಸ್ ಆಯೋಗ ವರದಿ ಕೊಟ್ಟು 2 ವರ್ಷ ಮೂರು ತಿಂಗಳಾಗಿದೆ. ವರದಿ ಸಲ್ಲಿಸುವಾಗ ನಮ್ಮ ಸರ್ಕಾರ ಇರಲಿಲ್ಲ.

ಅದಲ್ಲದೇ, ಮೀಸಲಾತಿ ಹೆಚ್ಚಿಸುವಂತೆ ನಾವು ಒತ್ತಾಯಿಸಿದ್ವಿ. ಸದನದಲ್ಲಿ ಕಾಂಗ್ರೆಸ್ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದ್ರು. ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ದೆಹಲಿಯಲ್ಲೇ ಕುಳಿತು ತಿದ್ದುಪಡಿ ಮಾಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

Exit mobile version