Site icon PowerTV

ಶಾಲಾ ಪೋಷಕರಿಂದ 100 ರೂ ದೇಣಿಗೆ ಸುತ್ತೋಲೆ ವಾಪಸ್.!

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯು (ಎಸ್‌ಡಿಎಂಸಿ) ಶಾಲೆಯ ಅಭಿವೃದ್ಧಿಗಾಗಿ ಪೋಷಕರಿಂದ 100ರೂ ವಸೂಲಿ ಆದೇಶದ ಸುತ್ತೋಲೆಯನ್ನ ರಾಜ್ಯ ಸರ್ಕಾರ ವಾಪಸ್​ ಪಡೆದಿದೆ.

ಸರ್ಕಾರಿ ಶಾಲೆ ಹಾಗೂ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ವಿದ್ಯಾರ್ಥಿಗಳ ಪೋಷಕರಿಂದ ದಾನ, ದೇಣಿಗೆ ರೂಪದಲ್ಲಿ ಎಸ್‌ಡಿಎಂಸಿಗಳ ಮೂಲಕ ಮಾಸಿಕ ತಲಾ 100 ರೂ. ಹಣ ಸಂಗ್ರಹಕ್ಕೆ ಅವಕಾಶ ನೀಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು.

ಇದಕ್ಕೆ ತೀವ್ರ ಮಟ್ಟದಲ್ಲಿ ರಾಜ್ಯ ಸರ್ಕಾರದ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವಿರುದ್ಧ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇಯಲ್ಲಿ ಈಗ ಶಾಲೆಯ ವಿದ್ಯಾರ್ಥಿಗಳ ಪೋಷಕರಿಂದ 100ರೂ ವಸೂಲಿ ಆದೇಶವನ್ನ ಮರಳಿ ಹಿಂಪಡೆದಿದೆ.

ಶಾಲೆಗಳ ಶೌಚಾಲಯ, ವಿದ್ಯುತ್ ಬಿಲ್, ಕಡಿಯುವ ನೀರು ನಿರ್ವಹಣೆ ಸೇರಿದಂತೆ ಇನ್ನೀತರ ಶಾಲಾ ಅಭಿವೃದ್ಧಿಗೆ ಪೋಷಕರಿಂದ 100 ರೂಪಾಯಿ ದೇಣಿಗೆ ರೂಪದಲ್ಲಿ ಪಡೆಯಲು ಎಸ್​ಡಿಎಂಸಿಗೆ ಅವಕಾಶ ನೀಡಿತ್ತು.

Exit mobile version