Site icon PowerTV

RTO ಚೆಕ್​​ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ

ಚಿಕ್ಕಬಳ್ಳಾಪುರ : ACB ರದ್ದುಗೊಂಡ ನಂತರ ರಾಜ್ಯದಲ್ಲಿ ಭ್ರಷ್ಟರ ಬೇಟೆಯಾಡುತ್ತಿರುವ ಲೋಕಾಯುಕ್ತ ಅಲ್ಲೊಂದು ಇಲ್ಲೊಂದು ಬೇಟೆಯಾಡುತ್ತಲೇ ಇದೆ. ನಿನ್ನೆ ಬೆಂಗಳೂರು, ಕೊಡಗು, ಮೈಸೂರಿನಲ್ಲಿ ಒಟ್ಟು ಮೂವರು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿತು.

ಇಂದು ಚಿಕ್ಕಬಳ್ಳಾಪುರದಲ್ಲಿ ಮತ್ತು ಕೋಲಾರದಲ್ಲಿ ಬೇಟೆಯಾಡುತ್ತಿದೆ. ವಾಹನ ಚಾಲಕರಿಂದ ಹೆಚ್ಚುವರಿ ಹಣ ವಸೂಲಿ ಆರೋಪ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ RTO ಚೆಕ್​ಪೋಸ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿರುವ ಈ ಚೆಕ್​ಪೋಸ್ಟ್​ ಮೇಲೆ ದಾಳಿ ನಡೆಸಿದಾಗ ಹಣ ಪತ್ತೆಯಾದ ಹಿನ್ನೆಲೆ ಅಧಿಕಾರಿಗಳು ದಾಖಲೆಗಳ ಜೊತೆ ಹಣದ ಮೂಲದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್​ಪಿ ಪವನ್ ನೆಜ್ಜೂರು ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಆರ್​ಟಿಒ ಇನ್ಸ್​ಪೆಕ್ಟರ್ ಮಹಾದೇವಪ್ಪ ಮತ್ತು ಸಿಬ್ಬಂದಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Exit mobile version