Site icon PowerTV

ಸಿಡಿಲು ಬಡಿದು ಇಬ್ಬರ ಸಾವು

ಬೀದರ್​ : ಸಿಡಿಲು ಬಡಿದು ಇಬ್ಬರ ದಾರುಣ ಸಾವಾಗಿರುವ ಘಟನೆ ಬೀದರ ಜಿಲ್ಲೆಯ ಕಮಲನಗರ ತಾಲೂಕಿನ ತೋರ್ಣ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

ಚಿಮ್ಮೆಗಾಂವ್ ಗ್ರಾಮದ ನಿವಾಸಿಗರಾದ ಕಚರಾಬಾಯಿ(೩೦) ಮತ್ತು ಕಿಶನ್ ವಿಠ್ಠಲ್(೨೮) ಎಂಬಾತರು ಸ್ಥಳದಲ್ಲೆ ಸಾವನಪ್ಪಿದ್ದಾರೆ. ಘಟನೆಯಲ್ಲಿ ಅರ್ಚನಾ ಎಂಬಾತಳಿಗೆ ಗಾಯಗಳಾಗಿದ್ದು ಗಾಯಾಳುವನ್ನು ಔರಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಹೊಲದಲ್ಲಿ ಸೋಯಾಬಿನ್ ಕಟಾವು‌ ಮಾಡುತ್ತಿದ್ದಾಗ ಒಮ್ಮಲೆ ಮಳೆ ಬಂದಿದೆ. ಹೀಗಾಗಿ‌ ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಬುಡಕ್ಕೆ ಹೊದಾಗ ಒಮ್ಮಲೆ ಸಿಡಿಲು ಬಡಿದೆ ಎನ್ನಲಾಗಿದೆ. ಸ್ಥಳಕ್ಕೆ ಠಾಣಾಕುಶನೂರ್ ಪೊಲೀಸರು ಭೇಟಿ ನೀಡಿದ್ದಾರೆ.

Exit mobile version