Site icon PowerTV

ಪತಿ ಸಾವಿನಿಂದ ಮನನೊಂದು ಪತ್ನಿ ಆತ್ಮಹತ್ಯೆ

ಬೆಳಗಾವಿ : ಪತಿ ಸಾವಿನಿಂದ ಮನನೊಂದು ಪತ್ನಿ ಕೂಡ ಆತ್ಮಹತ್ಯೆ ಮಾಡಿದ ಘಟನೆ ಬೆಳಗಾವಿಯ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ.

ಅಕ್ಟೋಬರ್ 20ರಂದು ವಿಷ ಸೇವಿಸಿದ್ದ ಹೊಳೆಪ್ಪ ಮಸ್ತಿ, ಯಮಕನಮರಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ತವರು ಮನೆ ವಂಟಮೂರಿಗೆ ಬಂದಿದ್ದ ಪತ್ನಿ ವಾಸಂತಿ ಆತ್ಮಹತ್ಯೆ ಮಾಡಿದರು.

ಇನ್ನು, ಕತ್ತು ಹಿಸುಕಿ ಮಗಳು ಮಾನಸ ಹತ್ಯೆಗೈದ ತಾಯಿ ವಾಸಂತಿ, ಬಳಿಕ ಮರಕ್ಕೆ ನೇಣು ಬಿಗಿದುಕೊಂಡು ವಾಸಂತಿ ಆತ್ಮಹತ್ಯೆ ಮಾಡಿದ್ದು, ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version