Site icon PowerTV

ಪತ್ನಿಯನ್ನು ಹತ್ಯೆ ಮಾಡಿ ಪೊಲೀಸ್ ಠಾಣೆಗೆ ಶರಣಾದ ಪಾಪಿ ಪತಿ

ಬೆಳಗಾವಿ : ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿ ಪೊಲೀಸ್ ಠಾಣೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕೊದನಾಪುರ ಗ್ರಾಮದ ಹೊರವಲಯದಲ್ಲಿ ತಡರಾತ್ರಿ ನಡೆದಿದೆ.

ಚನ್ನಬಸಪ್ಪ ಸಂಗಪ್ಪ ಅಡಕಿ (60).ಕೊಲೆ ಮಾಡಿದ ಪತಿ. ಸಂಗಪ್ಪ ಅಡಕಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ನಿವಾಸಿಯಾಗಿದ್ದು, ಕೌಟುಂಬಿಕ ಕಲಹಕ್ಕೆ ಬೇಸತ್ತು ಕೊದನಾಪುರದ ತವರು ಮನೆಯಲ್ಲಿ ವಾಸವಿದ್ದ ರುದ್ರವ್ವ ಅಡಕಿ. ಕೆಲ ದಿನಗಳ ಹಿಂದೆ ಪತ್ನಿಯ ತವರು ಮನೆಯಲ್ಲೇ ವಾಸವಿದ್ದ ಆರೋಪಿ ನಿನ್ನೆ ಬೆಳಿಗ್ಗೆ ‌ಪತಿ-ಪತ್ನಿ ಮಧ್ಯೆ ಗಲಾಟೆ ಆಗಿತ್ತು, ಬಳಿಕ ಹೊಲಕ್ಕೆ ಹೋಗಿದ್ದ ರುದ್ರವ್ವ ಅದೇ ಕೋಪದಲ್ಲಿ ಚನ್ನಬಸಪ್ಪ ಕುಡಗೋಲಿನಿಂದ ಕೊಚ್ಚಿ ರುದ್ರವ್ವನ ಕೊಲೆ ಮಾಡಿದ್ದಾನೆ.

ಇನ್ನು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿರುವ ರುದ್ರವ್ವ ಅಡಕಿ. ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡಿದಿದೆ.

Exit mobile version