Site icon PowerTV

ಗುಂಡಿ ಬಿದ್ದು ಹಾಳಾಗಿರುವ ರಸ್ತೆಗೆ ಪೂಜೆ

ಬೆಂಗಳೂರು : ಗುಂಡಿ ಬಿದ್ದು ಹಾಳಾಗಿರುವ ರಸ್ತೆಗೆ ಪೂಜೆ ಮಾಡಿರುವ ಘಟನೆ ಮೆಜೆಸ್ಟಿಕ್ ಬಸ್ ನಿಲ್ದಾಣ ದಲ್ಲಿ ನಡೆದಿದೆ.

ರಾಜಧಾನಿಯ ಮೆಜೆಸ್ಟಿಕ್ ಬಸ್ ನಿಲ್ದಾಣ ದಲ್ಲಿ ಬರಿ ಗುಂಡಿಗಳದ್ದೇ ಆರ್ಭಟವಾಗಿದ್ದು, ಯಮಸ್ವರೂಪಿ ಗುಂಡಿಗಳಿಗೆ KRS ಪಕ್ಷದಿಂದ ತೆಂಗಿನಕಾಯಿ, ಕುಂಕುಮ ಹಾಕಿ ಪೂಜೆ ಗುಂಡಿ ಪೂಜೆ ಮಾಡಲಾಗಿದೆ ಎಂದು KRS ಪಕ್ಷದ ಜನನಿ ,ಕಾರ್ಯಕರ್ತೆ ಹೇಳಿಕೆ ನೀಡಿದ್ರು, ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಸಾವಿರಾರು ಗುಂಡಿಗಳು ಇವೆ. BBMP ಸಾವಿಗೆ ಬೆಲೆ ಕಟ್ಟುತ್ತಿವೆ.

ನಿತ್ಯ ಕಾಲು ಕೈ ಮುರಿದುಕೊಳ್ಳುತ್ತಿದ್ದಾರೆ. BBMPಗೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಬೆಂಗಳೂರಿನ ಮರ್ಯಾದೆಯನ್ನು MLA , ಸಚಿವರು ಹಾಗೂ BBMP ಹರಾಜು ಹಾಕುತ್ತಿದೆ. BBMP 2 ಸಾವಿರ ಕೋಟಿ ಗುಂಡಿ ಮುಚ್ಚಲು ಹಣ ಖರ್ಚು ಮಾಡಿದ್ದೇವೆ ಅಂತ ಹೇಳುತ್ತೆ ಎಂದು ಹೇಳಿದ್ರು.

Exit mobile version