Site icon PowerTV

ಹೃದಯಾಘಾತದಿಂದ ಅಪ್ಪು ಅಭಿಮಾನಿ ಸಾವು

ಬೆಂಗಳೂರು : ಹೃದಯಾಘಾತದಿಂದ ಅಪ್ಪು ಅಭಿಮಾನಿ ಸಾವನ್ನಪ್ಪಿದ ಘಟನೆ ಮಲ್ಲೇಶ್ವರ ಲಿಂಕ್ ರಸ್ತೆಯಲ್ಲಿರುವ ಗಿರಿರಾಜ್‌ ನಿವಾಸದಲ್ಲಿ ನಡೆದಿದೆ.

ಟಿವಿಯಲ್ಲಿ ‘ಪುನೀತ ಪರ್ವ’ ನೋಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿದ್ದು, ತಕ್ಷಣವೇ ಕೆ.ಸಿ.ಜನರಲ್‌ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದರು. ಆದ್ರೆ ಗಿರಿರಾಜ್‌ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಗಿರಿರಾಜ್‌ಗೆ ಪುನೀತ್‌ ರಾಜ್‌ಕುಮಾರ್‌ ಅಂದ್ರೆ ಪಂಚಪ್ರಾಣ, ಮನೆಯಲ್ಲಿ ಅಪ್ಪು ಫೋಟೋಗೆ ದಿನ ಪೂಜೆ ಮಾಡ್ತಿದ್ದ ಗಿರಿರಾಜ್‌, ಎಂಥ ಮನುಷ್ಯ ಹೋಗಿ ಬಿಟ್ರು ಅಂತ ಪದೇಪದೆ ಹೇಳ್ತಿದ್ದ, ಮನೆಯಲ್ಲಿ ಕಾರ್ಯಕ್ರಮ ನೋಡುತ್ತಿದ್ದ ವೇಳೆ ಮನನೊಂದಿದ್ದ ಎಂದು ಮೃತ ಗಿರಿರಾಜ್‌ ತಂದೆ ಹೇಳಿದ್ದಾರೆ.

Exit mobile version