Site icon PowerTV

ಸಚಿವ ಎಂಟಿಬಿ ನಾಗರಾಜ್​-ಶಾಸಕ ಶರತ್​ ಬಚ್ಚೇಗೌಡ ನಡುವೆ ಸ್ಮಶಾನ ಟಾಕ್​ ವಾರ್​

ಬೆಂಗಳೂರು: ಒಕ್ಕಲಿಗ ಹಾಗು ಕುರುಬ ಸಮುದಾಯದ ಬದ್ದ ವೈರಿಗಳೆಂದೇ ಗುರುತಿಸಿಕೊಂಡಿರುವ ಹೊಸಕೋಟೆಯ ಎಂಟಿಬಿ ನಾಗರಾಜ್​ ಹಾಗೂ ಶಾಸಕ ಶರತ್​ ಬಚ್ಚೆಗೌಡರ ನಡುವೆ ವೈರತ್ವಯಿರುವುದು ಎಲ್ಲರಿಗು ತಿಳಿದೆಯಿದೆ. ಈಗ ಸಚಿವ ಎಂಟಿಬಿ-ಶಾಸಕ ಶರತ್ ನಡುವೆ ಟಾಕ್ ವಾರ್ ಶುರುವಾಗಿದೆ.

ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಸ್ಮಶಾನ ಜಾಗ ಒತ್ತುವರಿ ಆರೋಪ ಕೇಳಿಬಂದಿದೆ. ಹೊಸಕೋಟೆಯ ತೆನೆಯೂರು ಗ್ರಾಮದ ಸ್ಮಶಾನ ಜಾಗ ಶಾಸಕ ಶರತ್​ ಬಚ್ಚೇಗೌಡ ಅವರ ಹೆಸರಿನಲ್ಲಿದೆ ಎಂದಿದ್ದ ಎಂಟಿಬಿ ಮಾತಿಗೆ ಈಗ ಶರತ್ ಟಾಂಗ್ ನೀಡಿದ್ದಾರೆ.

ಎಂಟಿಬಿ ವಿರುದ್ದ ಶರತ್ ಬಚ್ಚೆಗೌಡ  ಮಾತನಾಡಿ, ನ್ಯಾಯಲಕ್ಕೆ ಹೋಗುವುದು ನ್ಯಾಯ ಕೇಳಲು ಹೋಗಿದ್ದೇನೆ. ಹೊರತು ಅನ್ಯಾಯ ಮಾಡಿ ಹೋಗಿಲ್ಲ. ಆಪರೇಷನ್ ಕಮಲದ ಸಮಯದಲ್ಲಿ ಸಚಿವ ಎಂಟಿಬಿ ನಾಗರಾಜ್ ಸಹ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆಗ ಆಪರೇಷನ್ ಕಮಲದ ಸಮಯದಲ್ಲಿ ತಾವು ಯಾಕೆ ಮಾಧ್ಯಮದವರ ಮುಂದೆ ಬರದೇ ನ್ಯಾಯಾಲದ ಮುಂದೆ ಹೋಗಿದ್ದರು ಎಂದು ಎಂಟಿಬಿಗೆ ಬಹಿರಂಗವಾಗಿ ಶರತ್​ ಪ್ರಶ್ನೆ ಮಾಡಿದ್ದಾರೆ.

ನಮ್ಮ ಪೂರ್ವಜರ ಕಾಲದಿಂದ, ಅಂದರೇ 1952 ರಿಂದ ಕೈಬರಹದ ಪಹಣಿಯಿಂದ 2002ರ ಕಂಪ್ಯೂಟರ್ ಪಹಣಿಯಲ್ಲಿ ನಮ್ಮ ಹೆಸರಿನಲ್ಲಿಯೇ ಜಮೀನು ಇದೆ. ಇದರ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ಎಂಟಿಬಿಗೆ ಇಲ್ಲ. ಸಚಿವ ಎಂಟಿಬಿ ನಾಗರಾಜ್ ಅಧಿಕಾರಿಗಳನ್ನ ದುರುಪಯೋಗ ಮಾಡಿಕೊಳ್ತಿದ್ದಾರೆ. ತೆನೆಯೂರು ಗ್ರಾಮದ ಸರ್ವೇ ನಂ.20ರಲ್ಲಿ 4 ಎಕರೆ ಸ್ಮಶಾನ ಜಾಗ ಇದೆ.

ಸಚಿವ ಎಂಟಿಬಿ ಅವರು ಬನ್ನಿ ನನ್ನ ಅನುದಾನದಿಂದ ಹಣ ನೀಡುತ್ತೇನೆ. ಇಬ್ಬರು ಸೇರಿ ಪೂಜೆ ಮಾಡಿ ಕಾಂಪೌಂಡ್ ನಿರ್ಮಾಣ ಮಾಡೋಣ, ರಾಜಕಾಲುವೆ ಒತ್ತುವರಿ ಮಾಡಿ ಬಾಗ್ಮನೆ ಟೆಕ್ ಪಾರ್ಕ್ ನಿರ್ಮಾಣ ಮಾಡಿದ್ದಾರೆ. ಇದನ್ನ ಕೆಡವಲು ಬಂದ ಅಧಿಕಾರಿಗಳ ತಡೆದಿದ್ದು ಯಾಕೆ, ಸಾವಿರಾರು ಕೋಟಿ ಇರುವವರು ರಾಜಕಾಲುವೆ ಒತ್ತುವರಿ ತೆರವು ಮಾಡಲು ಅನುವು ಮಾಡಿಕೊಡಬೇಕು ಎಂದು ಸಚಿವರಿಗೆ ಬಹಿರಂಗವಾಗಿ ಶಾಸಕರು ಸವಾಲೆಸಗಿದ್ದಾರೆ.

Exit mobile version