Site icon PowerTV

‘ಪುನೀತ ಪರ್ವ’ದಲ್ಲಿ ಭಾಗಿಯಾಗಲು ತಮಿಳು ನಟ ಸೂರ್ಯ, ತೆಲುಗು ನಟ ಅಖಿಲ್ ಅಕ್ಕಿನೇನಿ ಆಗಮನ

ಬೆಂಗಳೂರು: ಇಂದು ಅರಮನೆ ಮೈದಾನದಲ್ಲಿ ಪುನಿತ ಪರ್ವ ಹಾಗೂ ಗಂಧದಗುಡಿ ಫ್ರೀ ರಿಲಿಸ್ ಇವೆಂಟ್ ಹಿನ್ನಲೆಯಲ್ಲಿ ತೆಲುಗು ನಟ ಅಖಿಲ್ ಅಕ್ಕಿನೇನಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದರು.

ಹೈದರಾಬಾದ್ ನಿಂದ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಮಧ್ಯಾಹ್ನ ತೆಲುಗು ನಟ ಅಖಿಲ್ ಅಕ್ಕಿನೇನಿ ಆಗಮಿಸಿದರು. ಬಳಿಕ ಕೆಂಪೇಗೌಡ ಏರ್ಪೊಟ್ ನಿಂದ ಅಕ್ಕಿನೇನಿ​ ಅರಮನೆ ಮೈದಾನದತ್ತ ಹೊರಟರು.

ಅದರಂತೆ ಗಂಧದ ಗುಡಿ ಸಿನಿಮಾ ಪ್ರೀ ರಿಲೀಸ್​ ಇವೆಂಟ್​ನಲ್ಲಿ ಭಾಗಿಯಾಗಲು ಚೈನೈನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಮಿಳು ನಟ ಸೂರ್ಯ ಆಗಮಿಸಿದರು. ಬಳಿಕ ಏರ್ಪೊಟ್ ನಿಂದ ಬೆಂಗಳೂರು ಕಡೆ ಹೊರಟರು.

ಇನ್ನು ಈ ಕಾರ್ಯಕ್ರಮ ದೇಶದ ವಿವಿಧ ಭಾಷೆಯ ನಟರು ಆಗಮಿಸುತ್ತಿದ್ದು, ರಜನಿಕಾಂತ್​, ಅಮಿತಾ ಬಚ್ಚನ್​, ಯಶ್​, ಕಮಲ್​ ಹಾಸನ್, ಅಕ್ಷಯ್​ ಕುಮಾರ್​ ಸೇರಿದಂತೆ ಇನ್ನೀತರ ದಿಗ್ಗಜ ನಟರು ಭಾಗವಹಿಸಲಿದ್ದಾರೆ.

ಸುಮಾರು 1 ಲಕ್ಷ ಅಭಿಮಾನಿಗಳ ವರೆಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಎಲ್ಲಾ ಅಭಿಮಾನಿಗಳಿಗೆ ಮುಕ್ತವಾಗಿ ಈ ಕಾರ್ಯಕ್ರಮಕ್ಕೆ ರಾಜ್​ಕುಮಾರ್​ ಕುಟುಂಬ ಆಹ್ವಾನ ಮಾಡಿದೆ.

Exit mobile version