Site icon PowerTV

ಮೈಸೂರು ಭಾಗದ ಮತ ಕ್ಷೇತ್ರಗಳ ಜೆಡಿಎಸ್​​ ಅಭ್ಯರ್ಥಿಗಳ ಪಟ್ಟಿ ರಿಲೀಸ್​

ಮೈಸೂರು: ಮೈಸೂರು ಭಾಗದ ಕ್ಷೇತ್ರಗಳ ಮೊದಲ ಅಭ್ಯರ್ಥಿಗಳ ಪಟ್ಟಿ ಜೆಡಿಎಸ್​ ಶಾಸಕ ಜಿ.ಟಿ ದೇವೇಗೌಡ ಅವರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಘೋಷಣೆ ಮಾಡಿದ್ದಾರೆ.

ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಮತಕ್ಷೇತ್ರಕ್ಕೆ ಜಿ.ಟಿ ದೇವೇಗೌಡ, ಹುಣಸೂರಿಗೆ ಜಿ.ಟಿ ದೇವೇಗೌಡ ಮಗ ಹರೀಶ್‌ಗೌಡ, ಕೆ.ಆರ್ ನಗರಕ್ಕೆ ಸಾ.ರಾ ಮಹೇಶ್, ಪಿರಿಯಾಪಟ್ಟಣಕ್ಕೆ ಕೆ ಮಹದೇವ್, ತಿ.ನರಸೀಪುರಕ್ಕೆ ಅಶ್ಚಿನ್‌ಕುಮಾರ್, ಎಚ್.ಡಿ. ಕೋಟೆ ಮತಕ್ಷೇತ್ರಕ್ಕೆ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್‌ಗೆ ಬಹುತೇಕವಾಗಿ ವಿಧಾನಸಭಾ ಟಿಕೆಟ್​ ಫಿಕ್ಸ್​ ಎಂದು ಜಿ.ಟಿ.ಡಿ ಪ್ರಕಟಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಜಿಟಿಡಿ, ನಾನು ನಿನ್ನೆಯಿಂದಲೇ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಭಾಗಿಯಾಗಿದ್ದೇನೆ. ಮನಸ್ಸು ಮೂರು ವರ್ಷಗಳ ನಂತರ ಸಮಾಧಾನದಲ್ಲಿದೆ. ನಾನು ನನ್ನ‌ ಮನೆಯವರು ಹೆಚ್ಚು ಖುಷಿಯಲ್ಲಿದ್ದೇವೆ. ಇನ್ನೂ ಯಾವ ಗೊಂದಲಗಳು ಉಳಿದಿಲ್ಲ ಎಂದರು.

ಇನ್ನು ಚಾಮುಂಡಿ ತಾಯಿಗೆ ಎಚ್‌.ಡಿ. ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದರು. ಇನ್ನೊಂದು ತಿಂಗಳನಲ್ಲಿ ನಾನು ವಾಕ್ ಮಾಡುವ ಶಕ್ತಿಕೊಡು ಎಂದು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಬೇಡಿಕೊಂಡಿದ್ದಾರೆ. ಜನವರಿ ತಿಂಗಳಿನಲ್ಲಿ ಎಚ್.ಡಿ. ದೇವೇಗೌಡರು ಚಂಡಿಕಾ ಹೋಮ ನಡೆಸಲಿದ್ದಾರೆ. ದೇವೇಗೌಡರ ಉತ್ಸಾಹ ನಾವೇ ಅಚ್ಚರಿಗೆ ಒಳಗಾಗಿದ್ದೇವೆ. ಅವರೇ ನಮಗೆ ಪ್ರೇರಣೆಯಾಗಿದ್ದಾರೆ. ಅವರನ್ನು ಸಂತೋಷವಾಗಿಡುವುದೇ ನಮ್ಮ ಸಂತೋಷ ಎಂದು ಜಿಟಿಡಿ ಹೇಳಿದರು.

Exit mobile version