Site icon PowerTV

‘ಲವ್ಲಿ’ ಜೊತೆ ಲೈವ್ಲಿಯಾಗಿ ವಸಿಷ್ಠ ಬರ್ತ್ ಡೇ ಸೆಲೆಬ್ರೇಷನ್..!

ಬರ್ತ್ ಡೇ ಸಂಭ್ರಮದಲ್ಲಿರೋ ಲವ್ಲಿ ಹೀರೋ ವಸಿಷ್ಠ ಸಿಂಹಗೆ ಚಿತ್ರತಂಡ ಬೊಂಬಾಟ್ ಗಿಫ್ಟ್ ನೀಡಿದೆ. ಮಾಸ್ ಟೀಸರ್ ಜೊತೆ ಲೈವ್ಲಿ ಸೆಲೆಬ್ರೇಷನ್ ಮಾಡೋ ಮೂಲಕ ವಿಶಿಷ್ಟ ಕಲಾವಿದನಿಗೆ ಗೌರವ ಸಮರ್ಪಿಸಿದೆ. ಇಷ್ಟಕ್ಕೂ ವಸಿಷ್ಠ ಹುಟ್ದಬ್ಬ ಹೇಗಿತ್ತು ಅನ್ನೋದರೊಟ್ಟಿಗೆ ಒಂದಷ್ಟು ಸ್ಯಾಂಡಲ್​ವುಡ್ ಅಪ್ಡೇಟ್ಸ್ ಕೊಡ್ತೀವಿ. ನೀವೇ ಓದಿ.

ಸ್ಯಾಂಡಲ್​ವುಡ್​ನ ಪ್ರತಿಭಾವಂತ ನಟ ವಸಿಷ್ಠ ಸಿಂಹ 33 ವರ್ಷಗಳನ್ನ ಪೂರೈಸಿ, 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆರ್ ಆರ್ ನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳು ಹಾಗೂ ಚಿತ್ರರಂಗದ ಹಿತೈಷಿಗಳೊಂದಿಗೆ ಕೇಕ್ ಕಟ್ ಮಾಡಿ, ಅವ್ರ ಪ್ರೀತಿ, ಗೌರವ ಹಾಗೂ ಗಿಫ್ಟ್​ಗಳನ್ನ ಸ್ವೀಕರಿಸಿದ್ರು.

ಬರ್ತ್ ಡೇ ವಿಶೇಷ ಲವ್ಲಿ ಚಿತ್ರತಂಡ ಹೀರೋ ಇಂಟ್ರಡಕ್ಷನ್ ಟೀಸರ್​ನ ಗಿಫ್ಟ್ ಆಗಿ ನೀಡೋ ಮೂಲಕ ಸಂಭ್ರಮವನ್ನು ಡಬಲ್ ಮಾಡಿತು. ಚೇತನ್ ಕೇಶವ್ ನಿರ್ದೇಶನದ ಹಾಗೂ ರವೀಂದ್ರ ಕುಮಾರ್ ನಿರ್ಮಾಣದ ಲವ್ಲಿಯಲ್ಲಿ ಚಿಟ್ಟೆ ವಸಿಷ್ಠ ಮಾಸ್ ಖದರ್ ತೋರಲಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಹರೀಶ್ ಕೊಮ್ಮೆ ಎಡಿಟಿಂಗ್, ಅಶ್ವಿನ್ ಸಿನಿಮಾಟೋಗ್ರಫಿ ಚಿತ್ರಕ್ಕಿದ್ದು, ಟೀಸರ್​ನಿಂದ ಸಖತ್ ಇಂಪ್ರೆಸ್ಸೀವ್ ಅನಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

Exit mobile version