Site icon PowerTV

ಪತಿಯನ್ನೇ ಕೊಲೆಮಾಡಿದ ಪತ್ನಿ

ಹಾಸನ : ದೊಣ್ಣೆಯಿಂದ ಹಲ್ಲೆನಡೆಸಿ ಪತಿಯನ್ನು ಸ್ವತಃ ಪತ್ನಿಯೇ ಹತ್ಯೆಗೈದಿರುವ ಘಟನೆ ಹಾಸನ‌ ಜಿಲ್ಲೆಯ ಅರಕಲಗೂಡು ತಾಲೂಕಿನ ನೇರಳಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೃಷ್ಣೆಗೌಡ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದು, ಲೀಲಾವತಿ ಎಂಬಾಕೆ ಈ ಕುಕೃತ್ಯ ಮಾಡಿದ್ದಾರೆ.

ಪತಿ ಕೃಷ್ಣೇಗೌಡ ನಿತ್ಯ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದ ಈಗಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮೃತಪಟ್ಟ ಪತಿಯನ್ನು ಪತ್ನಿ ಲೀಲಾವತಿ ಮನೆಯ ಹಿಂಭಾಗ ಗುಂಡಿತೆಗೆದು ಹೂತಿದ್ದಾರೆ. ಪತಿಯನ್ನು ಹತ್ಯೆಗೈದು ತನ್ನ ಪಾಡಿಗೆ ತಾನು ಮನೆಯಲ್ಲಿದ್ದ, ಲೀಲಾವತಿ ಕಂಡು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಈಗಾಗಿ ಕೃಷ್ಣೇಗೌಡ ಕಾಣೆಯಾಗಿರೋ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಜನರ ಅನುಮಾನದ ಮೇಲೆ ಪೊಲೀಸರು ಕರೆತಂದು ವಿಚಾರಣೆ ಮಾಡಿದಾಗ ಹತ್ಯೆ ಕೇಸ್ ಬಯಲಾಗಿದೆ.

ಮಹಿಳೆಯನ್ನು ವಶಕ್ಕೆ ಪಡೆದು ಮೃತದೇಹ ಹೊರ ತೆಗೆಸೋ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version