Site icon PowerTV

ಅಯೋಧ್ಯ ರಾಮಮಂದಿರ ಸ್ಫೋಟಕ್ಕೆ PFI ಸಂಚು..!

ಅಯೋಧ್ಯ : ಅಯೋಧ್ಯ ರಾಮಮಂದಿರ ಸ್ಫೋಟಕ್ಕೆ PFI ಸಂಚು ಮಾಡಲಾಗಿದ್ದು, ಬಂಧಿತರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ನಿಷೇಧಿತ PFI ಸಂಘಟನೆಯಿಂದ ಸ್ಫೋಟಕ್ಕೆ ಪ್ಲ್ಯಾನ್‌ ಮಾಡಲಾಗಿದ್ದು, ಬಂಧಿತರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ರಾಮಮಂದಿರ ಧ್ವಂಸಕ್ಕೆ ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ ಮಾಡಲಾಗಿದ್ದು, ಭಾರತ, ಪಾಕ್‌, ಅರಬ್‌, ಅಫ್ಘಾನಿಸ್ತಾನದ 175 ಸದಸ್ಯರಿದ್ದಾರೆ.

ಇನ್ನು, ಬಂಧಿತ PFI ಕಾರ್ಯಕರ್ತರ ಮೊಬೈಲ್‌ನಲ್ಲಿ ಮಾಹಿತಿ ಲಭ್ಯವಾಗಿದ್ದು, ರಾಮಮಂದಿರ ನಾಶ, ದೇಶಾದ್ಯಂತ ಗಲಭೆಗೂ ಸಂಚು ಮಾಡಿದ್ದಾರೆ. ಬೀದಿ ಬೀದಿಗಳಲ್ಲಿ ದೊಂಬಿ, ರಕ್ತಪಾತಕ್ಕೆ ಸಂಚು ಮಾಡಲಾಗಿದ್ದು, ಮಹಾರಾಷ್ಟ್ರ ಎಸ್‌ಟಿಎಸ್‌ನಿಂದ PFI ಸಂಚು ಬಯಲಾಗಿದೆ. ಮಾಲೆಗಾಂವ್‌ನಲ್ಲಿ ಐವರು PFI ಕಾರ್ಯಕರ್ತರ ಬಂಧನವಾಗಿದ್ದು, ಬಂಧಿತರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

Exit mobile version