Site icon PowerTV

ಜೆಡಿಎಸ್​ ಪಕ್ಷ ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಕಣ್ಣೀರು ಹಾಕಿದ ಜಟಿಡಿ

ಮೈಸೂರು; ಹೆಚ್‌.ಡಿ ದೇವೇಗೌಡರಿಗೆ ನನ್ನ ಬಗ್ಗೆ ಪ್ರೀತಿ ಇದೆ. ಅವರು ನನಗೆ ಮರಿ ದೇವೇಗೌಡ ಎಂದು ಕರೆಯುತ್ತಿದ್ದರು ಎಂದು ಮಾಜಿ ಸಚಿವ, ಶಾಸಕ ಜಿಟಿ ದೇವೇಗೌಡ ಅವರು ಹೇಳಿದ್ದಾರೆ.

ಇಂದು ದೇವೇಗೌಡ ಅವರು ಭೇಟಿಯಾಗಿ ಮಾತನಾಡಿದ ಜಿಟಿಡಿ, ನಾನು ಜೆಡಿಎಸ್​ ಪಕ್ಷ ಬಿಟ್ಟು ಹೋಗಲ್ಲ. ಜೆಡಿಎಸ್ ಪಕ್ಷದಲ್ಲೆ ಇರುತ್ತಾನೆ. ಹಿಂದೆ ಹಲವು ಸ್ಥಾನವನ್ನ ಪಕ್ಷ ನೀಡಿದೆ.

ನಾನು ಪಕ್ಷದಿಂದ ಮೂರು ವರ್ಷ ದೂರ ಇದ್ದರೂ ನನ್ನ ಬಗ್ಗೆ ಪ್ರೀತಿ ಕಡಿಮೆ ಆಗಿರಲಿಲ್ಲ. ಹೆಚ್.ಡಿ ದೇವೇಗೌಡರು ಪ್ರಾದೇಶಿಕ ಪಕ್ಷ ಉಳಿಸಿದ್ದಾರೆ. ದೇವೇಗೌಡರು ಕಂಡ ಕನಸು ನನಸು ಮಾಡುತ್ತೇವೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಮತ್ತೆ ತರುತ್ತೇನೆ ಎಂದು ಜಿಟಿಡಿ ಗಳ ಗಳನೆ ಕಣ್ಣೀರಿಟ್ಟಿದ್ದಾರೆ.

ದೇವೇಗೌಡ ಅವರು ನನ್ನನ್ನು ರಾಜಕೀಯದಲ್ಲಿ ಪ್ರೀತಿ ಅಗ್ಗ ಕಟ್ಟಿ ಹಾಕಿದ್ದಾರೆ.  ನಾನು ಜೆಡಿಎಸ್ ನಲ್ಲಿ ಉಳಿಯಲು ಬಯಸುತ್ತೇನೆ. ಪಕ್ಷ ಹೇಳಿದ್ರೆ ಯಾವುದೇ ತ್ಯಾಗ ಮಾಡಲು ಸಿದ್ದನಿದ್ದೇನೆ ಎಂದು ಜಿಟಿಟಿ ಪಕ್ಷ ಬಿಡುತ್ತೇನೆ ಎಂಬ ಉಹಾಪೋಹ ಸುದ್ದಿಗಳಿಗೆ ತೆರೆ ಎಳೆದರು.

ಪಕ್ಷದಲ್ಲಿದ್ದು ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರನ್ನ ಸಿಎಂ ಮಾಡುತ್ತೇನೆ. ನನಗೆ ಪಕ್ಷದ ಬಗ್ಗೆ ಯಾವುದೇ ಮುನಿಸು ಇಲ್ಲ. ಒಂದೇ ಒಂದು ದಿನ ಈವರೆಗೂ ಪಕ್ಷಕ್ಕೆ ಕಳಂಕ ಅಥವಾ ಧಕ್ಕೆ ತಂದಿಲ್ಲ. ನನ್ನನ್ನು ಕಾಂಗ್ರೆಸ್​ ಪಕ್ಷಕ್ಕೆ ಸಿದ್ದರಾಮಯ್ಯ ಕರೆದಿದ್ದರು. ಅಲ್ಲದೇ, ಬಿಜೆಪಿನವರು ಕರೆದಿದ್ದಾರೆ. ಆದರೆ ನಾನು ಜೆಡಿಎಸ್ ಬಿಟ್ಟು ಹೋಗಲ್ಲ ಎಂದು ಜಿಟಿ ದೇವೇಗೌಡ ಅವರು ಬಿಜೆಪಿ ಹಾಗೂ ಕಾಂಗ್ರೆಸ್​ ಸೇರ್ಪಡೆ ಬಗ್ಗೆ ತಮ್ಮ ನಿರ್ಧಾರವನ್ನ ಅಲ್ಲಗಳೆದರು.

Exit mobile version