Site icon PowerTV

ತೋಂಟದಾರ್ಯ ಶ್ರೀಗಳ ಪುಣ್ಯ ಸ್ಮರಣೆ; ದರ್ಗಾದಲ್ಲಿ ಶ್ರೀಗಳ ಭಾವಚಿತ್ರವಿಟ್ಟು ಪೂಜೆ

ಗದಗ; ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಲಿಂಗೈಕ್ಯ ತೋಂಟದಾರ್ಯ ಶ್ರೀಗಳ ನಾಲ್ಕನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಇಂದು ಜರುಗಿತು.

ಶ್ರೀಗಳ ಕಂಚಿನ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಗೀತ ಶಾಲೆಯ ಮಕ್ಕಳಿಂದ ಸಂಗೀತೋತ್ಸವ, ನೃತ್ಯ ಸೇರಿದಂತೆ ಮನರಂಜನಾ ಕಾರ್ಯಕ್ರಮ ಈ ವೇಳೆ ನೆರವೇರಿದವು.

ಅಲ್ಲದೇ, ಮಠದ ಪಕ್ಕದಲ್ಲಿ ಇರುವ ದರ್ಗಾದಲ್ಲೂ ತೋಂಟದಾರ್ಯ ಶ್ರೀಗಳ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿದ್ದು ಕೋಮುಸೌಹಾರ್ದತಾ ತತ್ವಕ್ಕೆ ಸಾಕ್ಷಿಯಾಯಿತು.

ಈ ವೇಳೆ ರೋಣ ಮತಕ್ಷೇತ್ರದ ಮಾಜಿ ಶಾಸಕ ಜಿ.ಎಸ್ ಪಾಟೀಲ, ಶಾಸಕ ಎಸ್.ವಿ. ಸಂಕನೂರು, ಪ್ರಸ್ತುತ ಪೀಠಾಧ್ಯಕ್ಷರಾದ ತೋಂಟದಾರ್ಯ ಶ್ರೀಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Exit mobile version