Site icon PowerTV

ಕಂಡವರ ಮನೆಗೆ ಕನ್ನ ಧಾರ್ಮಿಕ ಕೇಂದ್ರಗಳಿಗೆ ದಾನ

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಒಬ್ಬ ವಿಚಿತ್ರ ಕಳ್ಳ ಸಿಕ್ಕಿಬಿದ್ದಿದ್ದು, ಐಷಾರಾಮಿ ಲೈಫ್, ಬ್ರ್ಯಾಂಡೆಡ್ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದು, ಆಸೆ ತೀರಿದ ಬಳಿಕ ಉಳಿದ ಹಣದಲ್ಲಿ ದಾನ, ಧರ್ಮ ಮಾಡುತ್ತಿದ್ದಾನೆ.

ನಗರದಲ್ಲಿ ಚರ್ಚ್, ದೇವಾಲಯಗಳ ಹುಂಡಿಗೆ ಹಣ ಹಾಕುವುದು, 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಪೊಲೀಸರ ಅಥಿತಿಯಾಗಿದ್ದಾನೆ. ಅದಲ್ಲದೇ, ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೀಣ್ಯಾ, ವಿಜಯನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ ಠಾಣೆಗಳಲ್ಲೂ ಕೇಸ್‌ ದಾಖಲಾಗಿದೆ.

ಇನ್ನು, ಕದ್ದ ಸ್ವಲ್ಪ ಹಣದಲ್ಲಿ ಐಷಾರಾಮಿ ಜೀವನ, ಮೋಜು ಮಸ್ತಿ ಮಾಡುತ್ತಿದ್ದ, ಇನ್ನುಳಿದ ಹಣವನ್ನ ದಾನ ಮಾಡಿ ಕಳೆಯುತ್ತಿದ್ದ. ಪ್ರತೀ ಬಾರಿ‌ ಬಂಧನವಾದಾಗಲೂ 15 ದಿನಗಳಲ್ಲೇ ಜಾಮೀನು ಪಡೆಯುತ್ತಿದ್ದ. ಸದ್ಯ ಮಡಿವಾಳ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Exit mobile version