Site icon PowerTV

ಕಾಡಾನೆ ದಾಳಿಯಿಂದ ವ್ಯಕ್ತಿಯೋರ್ವನಿಗೆ ಗಂಭೀರ ಗಾಯ

ಹಾಸನ: ಕಾಡಾನೆಯ ಏಕಾಏಕಿ ದಾಳಿಯಿಂದ ವ್ಯಕ್ತಿಯೋರ್ವನಿಗೆ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಲ್ಲೇನಹಳ್ಳಿ ಗ್ರಾಮದ ತೀರ್ಥ (27) ಗಂಭೀರವಾಗಿ ಗಾಯಗೊಂಡ ವ್ಯಕ್ತಿ, ಹೊಲದ ಬಳಿ ತೆರಳಿದಾಗ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿಗೆ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

ಕಾಡು ಆನೆ ಇಂದು ಬೆಳಿಗ್ಗೆಯಿಂದಲೂ ಹಾಸನ ತಾಲ್ಲೂಕಿನ ವರ್ತಿಕೆರೆ, ಕಾಳತಮ್ಮನಹಳ್ಳಿ, ಮಾದಾಪುರ, ಮಲ್ಲೇನಹಳ್ಳಿ ಗ್ರಾಮದ ಸುತ್ತಮುತ್ತ ಸಂಚರಿಸುತ್ತಿತ್ತು. ಕಾಡಾನೆ ಅಡಿಕೆ, ತೆಂಗು, ಜೋಳದ ಬೆಳೆಗಳನ್ನು ತುಳಿದು ನಾಶ ಮಾಡಿದೆ. ಸದ್ಯ ಕಾಡಾನೆ ದಾಳಿ ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ.

Exit mobile version