Site icon PowerTV

ಗಂಗಾ ಭವಾನಿಗೆ ರಾಹುಲ್ ನಮನ

ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಆಂಧ್ರ ಪ್ರದೇಶದಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಗಂಗಾ ಭವಾನಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ರಾಹುಲ್ ಗಾಂಧಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ರು.

ಕರ್ನಾಟಕದಿಂದ ತೆರಳಿದ ರಾಹುಲ್ ಗಾಂಧಿ ಆಂಧ್ರ ಪ್ರದೇಶದಲ್ಲಿ 3 ದಿನಗಳ ಕಾಲ ಪಾದಯಾತ್ರೆ ನಡೆಸಲಿದ್ದಾರೆ. ಆಂಧ್ರದಲ್ಲಿ ರಾಜಶೇಖರ್ ರೆಡ್ಡಿ ಅಕಾಲಿಕ ಮರಣ ಮತ್ತು ಆ ನಂತರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕಿದ್ದು ಹಲವು ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿದೆ. ಹೀಗಾಗಿ ರಾಹುಲ್ ಪಾದಯಾತ್ರೆ ಕಾಂಗ್ರೆಸ್​ ಮುಖಂಡರಿಗೆ ಹೊಸ ಚೈತನ್ಯ ತಂದಿದೆ.

Exit mobile version