Site icon PowerTV

ನಾನಂತೂ ಹಲಾಲ್ ಮಾಂಸ ತಿಂದಿಲ್ಲ, ತಿನ್ನೋದೂ ಇಲ್ಲ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಸಾವರ್ಕರ್ ಕುರಿತು ಕೆಲವರು ಪೂಜ್ಯ ಭಾವನೆ ಹೊಂದಿದ್ದಾರೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಕುರಿತು ಕೆಲವರು ಪೂಜ್ಯ ಭಾವನೆ ಹೊಂದಿದ್ದಾರೆ. ಇನ್ನೂ ಕೆಲವರು ಅಪಮಾನ ಆಗುವ ರೀತಿಯಲ್ಲಿ ಮಾತಾಡ್ತಾರೆ. ಅದು ರಾಜಕೀಯ ಪ್ರೇರಿತ ಹೇಳಿಕೆ.1944ರಲ್ಲಿ ವೀರ ಸಾವರ್ಕರ್ ಶಿವಮೊಗ್ಗಕ್ಕೆ ಭೇಟಿ ಮಾಡಿದ ಪುಣ್ಯ ಸ್ಮರಣೆಯಲ್ಲಿ ಕಾರ್ಯಕ್ರಮ ಆಯೋಜನೆಯಲ್ಲಿ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಭಾಗವಹಿಸಿದ್ದರು ಎಂದರು.

ಇನ್ನು, Paycm ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತಿ ದಿನ ಹೇಳಿಕೆ ಕೊಟ್ಟರೆ ಅವರಿಗೆ ಶಾಂತಿ ಸಿಗುತ್ತೆ ಅನ್ಸುತ್ತೆ.ಅವರ ಹೇಳಿಕೆಗೆ ಉತ್ತರ ಕೊಡಬೇಕಾಗಿಲ್ಲ, ಕಾಂಗ್ರೆಸ್ ಸರ್ಕಾರ ಬರೀ ಹೇಳಿಕೆಗೆ ಸೀಮಿತ, ಚುನಾವಣೆ ಬರ್ಲಿ, ಎಲ್ಲವನ್ನೂ ಬಿಚ್ಚಿಡ್ತೇವೆ ಎಂದು ಹೇಳಿದರು.

ಹಲಾಲ್ ಕಟ್ ವಿರೋಧಿ ಆಂದೋಲನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ದೇವರಿಗೆ ಎಡೆ ಇಡುತ್ತೇವೆ. ಅವರು ಹಲಾಲ್ ಮಾಡಿ ಎಡೆ ಇಡ್ತಾರಂತೆ. ನಮಗೆ ಅದನ್ನು ತಿನ್ನಲು ಗ್ರಹಚಾರನಾ.ಅವರು ಹಣವನ್ನೆಲ್ಲ ದೇಶದ್ರೋಹಿ ಚಟುವಟಿಕೆಗೆ ಬಳಸ್ತಾರೆ.ಹಿಂದು ಸಮಾಜ ಜಾಗೃತವಾಗಿದೆ. ನಾನಂತೂ ಹಲಾಲ್ ಮಾಂಸ ತಿನ್ನಿಲ್ಲ, ತಿನ್ನೋದೂ ಇಲ್ಲ. ಯಾವುದೇ ಮುಸಲ್ಮಾನ ಮನೆಯಲ್ಲಿ ತಿಂದಿಲ್ಲ ಎಂದರು.

Exit mobile version