Site icon PowerTV

ಮುಗಿಯುತ್ತಿಲ್ಲ ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ಫೈಟ್..!

ಬೆಂಗಳೂರು : ಗಣೇಶೋತ್ಸವಕ್ಕೆ ಅನುಮತಿ ನೀಡಿಲ್ಲ ಇದೀಗ ಕನ್ನಡ ರಾಜ್ಯೋತ್ಸವ ಆಚರಿಸಲು ಅನುಮತಿ ಕೊಡಿ ಎಂದು ಹಿಂದೂ ಪರ ಸಂಘನೆಗಳಿಂದ ಒಕ್ಕೊರಲು ಒತ್ತಾಯ ಮಾಡಿದೆ.

ನಗರದಲ್ಲಿ, ಮೈದಾನದಲ್ಲಿ ಮತ್ತೆ ಕನ್ನಡ ರಾಜ್ಯೋತ್ಸವ ವಿವಾದ ಭುಗಿಲೇಳುತ್ತಾ..? ಕನ್ನಡ ರಾಜ್ಯೋತ್ಸವ ಆಚರಣೆಗೆ ಮೈದಾನದಲ್ಲಿ ಸಿಗುತ್ತಾ ಅವಕಾಶ..? ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿದಂತೆ ಕನ್ನಡ ಧ್ವಜ ಹಾರುತ್ತಾ..? ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಪಟ್ಟು ಹಿಡಿದಿದ್ದಾರೆ.

ಇನ್ನು, ಗಣೇಶೋತ್ಸವಕ್ಕೆ ಅನುಮತಿ ಸಿಗದೆ ನಿರಾಸೆ ಗೊಂಡಿರೋ ಹಿಂದೂಪರ ಸಂಘಟನೆಗಳು, ಇದೀಗ ಕನ್ನಡ ರಾಜ್ಯೋತ್ಸವ ಆಚರಣೆಗೆ ಹಿಂದೂ ಪರ ಸಂಘಟನೆಗಳಿಂದ ಬಿಗಿಪಟ್ಟು ಹಿಡಿದಿದ್ದು, ಮೈದಾನದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಿಸಲು ಹಿಂದೂ ಪರ ಸಂಘಟನೆಗಳು ಸಿದ್ದತೆ ನಡೆಸಿದೆ.

Exit mobile version