Site icon PowerTV

ಸಲ್ಮಾನ್ ಖಾನ್​ ಡ್ರಗ್ಸ್ ತೆಗೆದುಕೊಳ್ಳುತ್ತಾರೆ, ನಟರ ಕುರಿತು ಸ್ಪೋಟಕ ಹೇಳಿಕೆ ನೀಡಿದ ಬಾಬಾ ರಾಮದೇವ್​

ಲಕ್ನೋ: ಯೋಗ ಗುರು ಬಾಬಾ ರಾಮದೇವ್ ಅವರು ಬಾಲಿವುಡ್ ಹಾಗೂ ಡ್ರಗ್ಸ್ ಬಗ್ಗೆ ಮಾತನಾಡಿ, ಡ್ರಗ್ಸ್​ ಪ್ರಕರಣಕ್ಕೆ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅವರ ಮಗನ ಹೆಸರನ್ನು ಹೇಳಿ ದೂಷಿಸಿದ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ ಎಂದು ವರದಿ ತಿಳಿಸಿವೆ.

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಡ್ರಗ್ಸ್ ವಿರೋಧಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಾಬಾ ರಾಮ್‌ದೇವ್, ಡ್ರಗ್ಸ್ ಪ್ರಕರಣಕ್ಕೆ ಬಾಲಿವುಡ್​ ನಟ-ನಟಿಯರನ್ನ ದೂಷಿಸಿದರು.

ಶಾರುಖ್ ಖಾನ್ ಅವರ ಮಗ(ಆರ್ಯನ್ ಖಾನ್) ಡ್ರಗ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿದ್ದಾನೆ. ಅವರು ಜೈಲಿಗೆ ಹೋದರು. ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸುತ್ತಾರೆ. ಅಮೀರ್ ಖಾನ್ ಬಗ್ಗೆ ನನಗೆ ಗೊತ್ತಿಲ್ಲ. ಈ ನಟರ ಬಗ್ಗೆ ದೇವರಿಗೆ ಗೊತ್ತು ಎಂದು ಯೋಗ ಗುರು ಹೇಳಿದರು.

ಎಷ್ಟು ಸಿನಿಮಾ ತಾರೆಯರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಯಾರಿಗೆ ಗೊತ್ತು. ಬಾಲಿವುಡ್​ ನಟಿಯರು ಇನ್ನೂ ಕೆಟ್ಟದಾಗಿದೆ. ಚಿತ್ರರಂಗದಲ್ಲಿ ಎಲ್ಲೆಡೆ ಡ್ರಗ್ಸ್ ದಂಧೆ ಇದೆ. ಬಾಲಿವುಡ್‌ನಲ್ಲಿ ಡ್ರಗ್ಸ್ ಇದೆ, ರಾಜಕೀಯದಲ್ಲಿ ಡ್ರಗ್ಸ್ ಇದೆ ಎಂದು ಅವರು ಮೂರು ದಿನಗಳ ಹೇಳಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಇನ್ನು ರಾಮ್‌ದೇವ್ ಆಧಾರವಿಲ್ಲದೆ ಆರೋಪಕ್ಕೆ ಯಾವುದೇ ಸೆಲೆಬ್ರಿಟಿಗಳು ಇಲ್ಲಿವರೆಗೂ ಪ್ರತಿಕ್ರಿಯಿಸಿಲ್ಲ.

Exit mobile version