Site icon PowerTV

ಸಂಸದ ಅವಧಿ ಮುಕ್ತಾಯದ ಬಳಿಕ ರಾಜಕೀಯ ನಿವೃತ್ತಿ; ಶ್ರೀನಿವಾಸ ಪ್ರಸಾದ್ ಘೋಷಣೆ

ಮೈಸೂರು; 2024 ಕಕ್ಕೆ ಸಂಸದ ಸ್ಥಾನದ ಅವಧಿ ಮುಗಿಯುವುದರೊಂದಿಗೆ ನನ್ನ ಚುನಾವಣಾ ರಾಜಕೀಯಕ್ಕೆ ಐದು ದಶಕಗಳಾಗಲಿವೆ. ಆರೋಗ್ಯ ಸರಿಯಿಲ್ಲದ ಕಾರಣ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಚಾಮರಾಜ ನಗರ ಸಂಸದ ವಿ. ಶ್ರೀನಿವಾಸಪ್ರಸಾದ್ ಘೋಷಣೆ ಮಾಡಿದ್ದಾರೆ.

ಮೈಸೂರಿನಲ್ಲಿಂದು ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿವರೆಗೂ 14 ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಅದರಲ್ಲಿ 11 ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ನನ್ನ ಚುನಾವಣಾ ರಾಜಕೀಯಕ್ಕೆ ಐದು ದಶಕಗಳಾಗಲಿವೆ. ಆರೋಗ್ಯ ಸರಿಯಿಲ್ಲದ ಕಾರಣ ಮುಂದಿನ ದಿನಗಳಲ್ಲಿ ರಾಜಕಾರಣ ನಿವೃತ್ತಿ ಪಡೆಯಲಿದ್ದೇನೆ ಎಂದು ತಿಳಿಸಿದರು.

ಅಂತೆಯೇ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದಿದೆ. ಆದರೂ ದಲಿತರು ಪ್ರತ್ಯೇಕ ಕಾಲೊನಿಗಳಲ್ಲಿ ವಾಸಿಸುತ್ತಿದ್ದಾರೆ. ಎಲ್ಲರೊಳಗೂಡಿ ಸಾಮಾಜಿಕವಾಗಿ ವಾಸಿಸಲು ವಾಸಿಸಲು ದಲಿತರಿಗೆ ಸಾಧ್ಯವಾಗದಿರುವುದು ವಿಪರ್ಯಾಸ ಎಂದು ನೋವು ವ್ಯಕ್ತಪಡಿಸಿದರು.

Exit mobile version