Site icon PowerTV

ದಾವಣಗೆರೆಯಲ್ಲಿ ಬೆಣ್ಣೆದೋಸೆ ಸವಿದ ಮೋಹಕ ತಾರೆ ರಮ್ಯಾ

ದಾವಣಗೆರೆ; ಬೆಣ್ಣೆ ನಗರಿಯಲ್ಲಿ ಮೋಹಕ ತಾರೆ ರಮ್ಯಾ ಅವರು ನಗರದ ಗುರುಕೊಟ್ಟೂರೇಶ್ವರ ಹೋಟೆಲ್​ನಲ್ಲಿ ಜಬರ್ದಸ್ತಾಗಿ ಬೆಣ್ಣೆದೋಸೆ ಸವಿದಿದ್ದಾರೆ.

ನಿನ್ನೆ(ಭಾನುವಾರ) ನಟ ಡಾಲಿ ಧನಂಜಯ್​ ಅಭಿನಿಯದ ಹೆಡ್ ಬುಷ್ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ರಮ್ಯಾ ಆಗಮಿಸಿದ್ದರು. ದಾವಣಗೆರೆ ನಗರದ ಗುರುಕೊಟ್ಟೂರೇಶ್ವರ ಹೋಟೆಲ್ ನಲ್ಲಿ ದೋಸೆ ಸವಿದು ನಂತರ ಮಾತನಾಡಿದ ರಮ್ಯಾ, ನಾನು ಎರಡು ದೋಸೆ ತಿಂದೆ, ಒಂದು ಖಾಲಿ ದೋಸೆ, ಒಂದು ಬೆಣ್ಣೆದೋಸೆ. ಟೇಸ್ಟ್ ಸೂಪರ್ ಆಗಿ ಇತ್ತು. ಮನೆಯಲ್ಲಿ ತಗೊಂಡೋಗಿ ಪಾರ್ಸಲ್ ತಿನ್ನೋದರ ಬದಲು, ಇಲ್ಲಿಗೆ ಬಂದು ತಿಂದರೆ ಅದರ ಟೇಸ್ಟೇ ಬೇರೆ ಇರುತ್ತದೆ ಎಂದರು.

ಹಳ್ಳಿಯ ಬೆಣ್ಣೆ ಬಳಸಿ ದೋಸೆ ಮಾಡ್ತಾರೆ ಪ್ಯಾಕೇಟ್ ಬೆಣ್ಣೆ ಅಲ್ಲ. ನಿನ್ನೆ ಪ್ರೋಗ್ರಾಂನಲ್ಲಿ ದಾವಣಗೆರೆ ಜನರು ಸಜೆಸ್ಟ್ ಮಾಡಿದ್ದರು. ಗುರು ಕೊಟ್ಟೋರೇಶ್ವರ ಬೆಣ್ಣೆದೋಸೆ ಹೋಟೆಲ್ ಗೆ ಹೋಗಿ ಅಂತಾ, ಜನರು ಹೇಳಿದ್ದಕ್ಕೆ ಇಂದು ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಸವಿದಿದ್ದೇನೆ ಎಂದು ತಿಳಿಸಿದರು.

ನಮ್ಮ ಊಟ ನಮ್ಮ ಸಂಸ್ಕೃತಿ ಎಷ್ಟು ಬೆಳೆಸಿದ್ರು ಉದ್ಯಮ ಬೆಳೆಯುತ್ತಲೇ ಇದೆ. ದಾವಣಗೆರೆ ಜನತೆಗೆ ಧನ್ಯವಾದಗಳು ಎಂದು ರಮ್ಯಾ ದೋಸೆ ಸವಿದ ಬಳಿಕ ಹೇಳಿದರು.

Exit mobile version