Site icon PowerTV

ಯತ್ನಾಳ ವಿರುದ್ದ ಮತ್ತೆ ಹರಿಹಾಯ್ದ ಅರುಣ್ ಸಿಂಗ್

ಚಿಕ್ಕೋಡಿ : ಕಾಂಗ್ರೆಸ್ ಅವಧಿಯಲ್ಲಿ ಯಾವ ಫಲನಾನುಭವಿಗಳಿಗೆ ಏನೇನು ಮಾಡಿದ್ದಾರೆ ಎಂದು ಚರ್ಚೆ ಮಾಡಲಿ, ಎಂದು ಚಿಕ್ಕೋಡಿಯಲ್ಲಿ ಮಾಧ್ಯಮಗಳಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ ಯಾರ್ರಿ?? ಕೋರ್ ಕಮೀಟಿ ಸದಸ್ಯನೂ ಅಲ್ಲ ರಾಜ್ಯ ನಾಯಕನೂ ಅಲ್ಲ ಅವನೊಬ್ಬ ಶಾಸಕ ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ವಿರುದ್ದ ಪಂಚಮಸಾಲಿ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಂಚಮಸಾಲಿಯ ನಾಲ್ಕು ಜನ ಸಚಿವರು ನಮ್ಮಲ್ಲಿ ಇದ್ದಾರೆ, ಸ್ವಾಮೀಜಿಗಳೂ ಸಹ ಮೋದಿಯವರೊಂದಿಗೆ ಖುಷಿಯಾಗಿದ್ದಾರೆ. ಅಸಮಾಧಾನದ ಪ್ರಶ್ನೆಯೇ ಬರಲ್ಲ ಎಂದರು.

ಕಾಂಗ್ರೆಸ್ ಭಾರತ್ ಜೋಡೊ ಯಾತ್ರೆ ಮಾಡಿತ್ತಿದೆ. ಯಾತ್ರೆ ಉದ್ದಕ್ಕೂ ಸಹ ಫಲಾನುಭವಿಗಳ ಸಭೆ ಮಾಡಲಿ, ಕಾಂಗ್ರೆಸ್ ಅವಧಿಯಲ್ಲಿ ಯಾವ ಫಲನಾನುಭವಿಗಳಿಗೆ ಏನೇನು ಮಾಡಿದ್ದಾರೆ ಎಂದು ಚರ್ಚೆ ಮಾಡಲಿ, ಉಚಿತ ಅನ್ನ, ಗ್ಯಾಸ್, ಆಯುಷ್ಮಾನ್ ಹೆಲ್ತ್​ ಕಾರ್ಡ್ ಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿದ್ದು, ಅವರ ಅಧಿಕಾರಾವಧಿಯ ಫಲಾನುಭವಿಗಳ ಜತೆ ಸಭೆ ಮಾಡಿದರೆ ಅವರಿಗೆ ಶೂನ್ಯ ಉತ್ತರ ಸಿಗುತ್ತೆ, ಅದೇ ಕಾರಣಕ್ಕಾಗಿ ಜನರಿಂದ ಕಾಂಗ್ರೆಸ್​ನವರು ದೂರ ಓಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Exit mobile version