Site icon PowerTV

‘ಸಲಾರ್’ ಚಿತ್ರದ ಪೃಥ್ವಿರಾಜ್ ಫಸ್ಟ್ ಲುಕ್ ಬಿಡುಗಡೆ ಮಾಡಿದ ಹೊಂಬಾಳೆ ಫಿಲ್ಮ್ಸ್​​

ಬೆಂಗಳೂರು: ಕೆಜಿಎಫ್ ಮಾಸ್ಟರ್ ಮೈಂಡ್‌ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಸಲಾರ್​, ಖ್ಯಾತ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ ಅವರ ಫಸ್ಟ್ ಲುಕ್​ನ್ನ ಹೊಂಬಾಳೆ ಫಿಲ್ಮ್ಸ್​​ ಬಿಡುಗಡೆ ಮಾಡಿದೆ.

ಸಲಾರ್​​ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸಿದ್ದಾರೆ ಮತ್ತು ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಸಲಾರ್ ಚಿತ್ರ ಮುಂದಿನ ವರ್ಷ ಸೆ. 28 ರಂದು ತೆಲುಗು ಮತ್ತು ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳ ಡಬ್ಬಿಂಗ್ ಆವೃತ್ತಿಗಳಲ್ಲಿ ತೆರೆ ಮೇಲೆ ಬರಲು ಸಜ್ಜಾಗಿದೆ.

400 ಪ್ಲಸ್ ಕೋಟಿ ಬಜೆಟ್‌ನ ಬಹು ನಿರೀಕ್ಷಿತ ಸಲಾರ್ ಚಿತ್ರ ಮಾಡಲಾಗುತ್ತದೆ ಎನ್ನಲಾಗಿದ್ದು, ಈಗ ಖ್ಯಾತ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ ಅವರ ಜನ್ಮ ದಿನಕ್ಕಾಗಿ ಫಸ್ಟ್ ಲುಕ್​ನ್ನ ಹೊಂಬಾಳೆ ಫಿಲ್ಮ್ಸ್​​ ಬಿಡುಗಡೆ ಮಾಡಿದೆ. ಇದರಲ್ಲಿ ಕ್ರೂರವಾಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಕಾಣಬಹುದು.

ಇದಕ್ಕೆ ಟ್ವಿಟ್​ ಮಾಡಿದ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್, ಸಲಾರ್​ ಚಿತ್ರದ ಇಡೀ ತಂಡಕ್ಕೆ ಧನ್ಯವಾದಗಳು ತಿಳಿಸಿ, ವರ್ಧರಾಜ ಮನ್ನಾರ್ ಸೆ.28, 2023 ರಂದು ಚಿತ್ರಮಂದಿರಗಳಲ್ಲಿ ನೀವು ನೋಡುಬಹುದು ಎಂದಿದ್ದಾರೆ.

Exit mobile version