Site icon PowerTV

ತಡರಾತ್ರಿ ಭೀಕರ ಅಪಘಾತ : ಮಕ್ಕಳು ಸೇರಿ 9 ಮಂದಿ ಸ್ಥಳದಲ್ಲೇ ಸಾವು

ಹಾಸನ : ಬಸ್, ಟಿಟಿ ಹಾಗೂ ಟ್ಯಾಂಕರ್ ನಡುವೆ ಅಪಘಾತ ನಡೆದ ಘಟನೆ ಅರಸೀಕೆರೆ ತಾಲೂಕಿನ ಗಾಂಧಿನಗರ ಗ್ರಾಮದ ಬಳಿ ನಡೆದಿದೆ.

ನಗರದ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಧರ್ಮಸ್ಥಳದಿಂದ ವಾಪಸ್​ ಆಗುತ್ತಿದ್ದಾಗ ಈ ಘಟನೆ ನಡೆದಿದ್ದು, ಲೀಲಾವತಿ (50), ಚೈತ್ರಾ (33), ಸಮರ್ಥ (10), ದೀಪ್ತಿ (12) ತನ್ಮಯ್ (10), ಧ್ರುವ (2), ವಂದನಾ (20), ದೊಡ್ಡಯ್ಯ (60), ಭಾರತಿ (50) ಮೃತರಾಗಿದ್ದಾರೆ.

ಇನ್ನು, ಟಿಟಿಯಲ್ಲಿ 14 ಮಂದಿ ಧರ್ಮಸ್ಥಳಕ್ಕೆ ತೆರಳಿದ್ದರು, ಗಾಯಾಳುಗಳು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

Exit mobile version